Advertisement
ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಆರ್ಕುಂದ ಗ್ರಾಮದ ಈ ಯುವಕ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೂಡ ಬೇಸಾಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಮೂಲತಃ ರೈತ ಕುಟುಂಬದಿಂದ ಬೆಳೆದು ಬಂದು ಸ್ನಾತಕೋತ್ತರ ಪದವೀಧರರಾಗಿರುವ ಇವರು ನಿತ್ಯ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ದಾಹವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದು, ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ತರಬೇತಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
Advertisement
ನಗರದಲ್ಲಿ ಜೋರು ವ್ಯಾಪಾರ; ಮುಂಗಾರು ಆರಂಭದ ಮೇ ಕೊನೆಯವಾರದಿಂದ ಹಿಡಿದು ಜುಲೈ ತಿಂಗಳು ಮುಗಿಯುವವ ರೆವಿಗೂ ಈ ನೇರಳೆ ಹಣ್ಣುಗಳು ಮರದಲ್ಲಿ ಮತ್ತು ಮಾರುಕಟ್ಟೆಯಲ್ಲಿ ಸಿಗುತ್ತವೆ. ವ್ಯಾಪಾರಸ್ಥರು ಗ್ರಾಮೀಣ ಭಾಗದಲ್ಲಿರುವ ಈ ಹಣ್ಣನ್ನು ಮರದ ರೂಪದಲ್ಲಿ ಕೊಂಡು ನಂತರ ಅವುಗಳನ್ನು ಜೋಪಾನವಾಗಿ ಬಿಡಿಸಿಕೊಂಡು ಬಂದು ನಗರದ ಜನನಿಬಿಡ ಪ್ರದೇಶದಲ್ಲಿ ಮಾರಾಟ ಮಾಡಲು ಮುಂದಾಗುತ್ತಾರೆ. ಆರಂಭದ ದಿನಗಳಲ್ಲಿ ಕೆ.ಜಿ ಜಂಬುನೇರಳೆ ಹಣ್ಣಿನ ಬೆಲೆ 180 ರಿಂದ 400 ರೂಗಳು ನಂತರದ ದಿನಗಳಲ್ಲಿ 140 ರಿಂದ 160 ರೂಗಳಿಗೆ ಇಳಿಮುಖವಾಗುತ್ತದೆ. ಆದರೂ ಇದರ ಬೇಡಿಕೆ ಮಾತ್ರ ಹೆಚ್ಚಾಗಿರುತ್ತದೆ.
ಜಂಬು ನೇರಳೆ ಗಿಡಗಳನ್ನು ಬೆಳೆಸಿ; ಸರ್ಕಾರ ಹಾಗೂ ಸಂಘಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಪ್ರದೇಶ, ಶಾಲಾ ಕಾಲೇಜುಗಳ ಆವರಣ, ರಸ್ತೆ ಬದಿಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ಪ್ರತೀ ಗ್ರಾಪಂ ಮಟ್ಟದಲ್ಲಿ ತಿಳಿಸಿದೆ. ಇದರ ಸಲುವಾಗಿ ಅಧಿಕಾರಿಗಳು ಮತ್ತು ಸ್ವಯಂಸೇವಕರು ಹೆಚ್ಚಿನ ಜಂಬು ನೇರಳೆ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದಲ್ಲಿ ಮುಂದಿನ ನಾಲ್ಕೆ ೖದು ವರ್ಷಗಳಲ್ಲಿ ಉತ್ತಮ ಫಸಲನ್ನು ಕಾಣುವುದಲ್ಲದೆ ಸಾಕಷ್ಟು ನೇರಳೆ ಹಣ್ಣುಗಳನ್ನು ಸ್ಥಳೀಯ ಸಮುದಾಯದಲ್ಲೆ ಪಡೆಯಬಹುದಾಗಿದೆ. ಅಲ್ಲದೆ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಲು ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಜಗನ್ನಾಥ್. ಇದರ ಬಗ್ಗೆ ಹೆಚ್ವಿನ ಮಾಹಿತಿ ಪಡೆಯಲು 9986291418 ಸಂಪರ್ಕಿಸಬಹುದಾಗಿದೆ.