Advertisement

ಉತ್ತಮ ಸಂಸ್ಕಾರ-ಮಾರ್ಗದರ್ಶನದಿಂದ ಸಾಧನೆ

06:28 PM Dec 30, 2021 | Team Udayavani |

ಐಗಳಿ: ತಂದೆ ತಾಯಿಯಿಂದ ಉತ್ತಮ ಸಂಸ್ಕಾರ, ಗುರುಗಳಿಂದ ಒಳ್ಳೆಯ ಮಾರ್ಗದರ್ಶನ ಪಡೆದ ರವೀಂದ್ರ ಗಡಾದೆಯವರ ಪ್ರಯತ್ನ ಅವರನ್ನು ಐಪಿಎಸ್‌ ಹುದ್ದೆಗೇರಿಸಿದೆ ಎಂದು ಕೌಲಗುಡ್ಡ ಸಿದ್ದಗಿರಿ ಆಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.

Advertisement

ಗ್ರಾಮದಲ್ಲಿ ಕೆಎಎಸ್‌ ಹುದ್ದೆಯಿಂದ ಐಪಿಎಸ್‌ ಹುದ್ದೆಗೆ ಪದೋನ್ನತಿ ಪಡೆದ ರವೀಂದ್ರ ಗಡಾದೆ, ಪಿಎಸ್‌ಐ ಹುದ್ದೆಯಿಂದ ಸಿಪಿಐ ಹುದ್ದೆಗೆ ಪದೋನ್ನತಿ ಪಡೆದ ಮಲ್ಲಿಕಾರ್ಜುನ ಸಿಂದೂರ ಹಾಗೂ ಅಬಕಾರಿ ಇಲಾಖೆಯಲ್ಲಿನ ಸೇವೆಗಾಗಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಅಬುಬಕರ್‌ ಮುಜಾವರ ಅವರ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಕಾರ್ಯ ಚಟುವಟಿಕೆಗಳಿಂದ ಸಮಾಜ ನಮ್ಮನ್ನು ಗುರುತಿಸುತ್ತದೆ. ಆ ಅವಕಾಶ ಮತ್ತು ಅಧಿಕಾರದ ಸದುಪಯೋಗ ಮಾಡಿಕೊಂಡು ಯುವಕರಿಗೆ ದಾರಿ ದೀಪವಾಗಿರಿ ಎಂದರು.

ಗ್ರಾಮಸ್ಥರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅಧಿಕಾರಿ ರವೀಂದ್ರ ಗಡಾದೆ, ನನ್ನ ಈ ಶ್ರೇಯಸ್ಸಿಗೆ ತಂದೆ, ತಾಯಿ ಹಾಗೂ ಗುರುಗಳ ಮಾರ್ಗದರ್ಶನ ಕಾರಣ. ಒಳ್ಳೆಯ ಅಧಿಕಾರಿಯಾಗಲು ಬಡತನ ಅಥವಾ ಸಿರಿತನ ಕಾರಣವಲ್ಲ. ಒಳ್ಳೆಯ ಗುರಿ ಇಟ್ಟು ನಡೆದರೆ ಅದು ಸಾಧ್ಯ ಎಂದರು.

ಸಿಪಿಐ ಮಲ್ಲಿಕಾರ್ಜುನ ಸಿಂದೂರ ಹಾಗೂ ಅಬಕಾರಿ ಅಧಿಕಾರಿ ಅಬುಬಕರ್‌ ಮುಜಾವರ ಸತ್ಕಾರಸ್ವೀಕರಿಸಿಮಾತನಾಡಿ,ಸಮಾಜಮುಖೀಯಾಗಿ ಕಾರ್ಯನಿರ್ವಹಿಸಿ ಗ್ರಾಮಕ್ಕೆ ಕೀರ್ತಿ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿದರು. ರವೀಂದ್ರ ಗಡಾದೆಯವರ ತಂದೆ ಹಾಗೂ ಪತ್ನಿ ವರ್ಷಾ ಗಡಾದೆ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ರಾಜಶ್ರೀ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸಿ ಎಸ್‌ ನೇಮಗೌ ‌ ಡ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ತಾಪಂ ಸದಸ್ಯ ಯಲ್ಲಪ್ಪ ಮಿರ್ಜಿ, ಬಿ ಎಸ್‌ ಬಿರಾದಾರ, ಆರ್‌ ಆರ್‌ ತೆಲಸಂಗ, ಬಸವರಾಜ ಬಿರಾದಾರ,ಅಪ್ಪಾಸಾಬಪಾಟೀಲ, ಎಎಸ್‌ ತೆಲಸಂಗ ಹಾಗೂ ಕೋಹಳ್ಳಿ ‌ , ಪಡತರವಾಡಿ,ತೆಲಸಂಗ ‌ , ಬಾಡಗಿ, ಅರಟಾಳ, ಅಥಣಿ, ಕೊಕಟನೂರ, ಐಗಳಿ ಮೊದಲಾದ ಗ್ರಾಮಗಳ ಸಾವಿರಾರು ಜನ ಪಾಲ್ಗೊಂಡಿದ್ದರು. ಮಹಾಂತೇಶ ನಿರೂಪಿಸಿದರು, ಬಸವರಾಜ ತೆಲಸಂಗ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next