ಮೂಡುಬಿದಿರೆ: ನ್ಯೂಯಾರ್ಕ್‌ನ ಓಸ್ವೇಗೋ ವಿವಿ ಯಲ್ಲಿ ಜೂ. 19ರಂದು ನಡೆದ ಅಂತಾರಾಷ್ಟ್ರೀಯ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಮೋಘ ನಾರಾಯಣ ಸೆಕೆಂಡ್ ಗ್ರಾಂಡ್ ಪ್ರಶಸ್ತಿಯೊಂದಿಗೆ ರಜತ ಪದಕ ಗಳಿಸಿದ್ದಾರೆ. ಅವರಿಗೆ ಅಮೆರಿಕದಲ್ಲಿ ವಿದ್ಯಾರ್ಥಿ ವೇತನ ಸಹಿತ ಉಚಿತ ಶಿಕ್ಷಣದ ಕೊಡುಗೆ ಲಭಿಸಿದೆ.
ಸ್ಪರ್ಧೆಯಲ್ಲಿ 79 ದೇಶಗಳಿಂದ 1,269 ಸ್ಪರ್ಧಾಳುಗಳು ಭಾಗವಹಿಸಿದ್ದರು. ಅಮೋಘನ “ಕೋಕಂ ಹಣ್ಣಿನ ತಿರುಳು ಮತ್ತು ಅಂಟುವಾಳ ಬಳಸಿ ತಯಾರಿಸುವ ಪರಿಸ್ನೇಹಿ ಕಳೆನಾಶಕ’ ದ್ವಿತೀಯ ಸ್ಥಾನ ಗಳಿಸಿದೆ.
ಅವನ ಯೋಜನೆಯ ವಿಷಯವು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿರುವ “ಹೈಸ್ಕೂಲ್ ರಿಸರ್ಚ್ ಆ್ಯಂಡ್ ಸ್ಟೇಟ್ ಯೂನಿ ವರ್ಸಿಟಿ ಆಫ್ ನ್ಯೂಯಾರ್ಕ್’ ಅಂತಾ ರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟ ವಾಗಲು ಆಯ್ಕೆಯಾಗಿದೆ. ಇದೇ ಸಂಸ್ಥೆ ಅಮೋಘ ನಾರಾಯಣಗೆ ಅಮೆರಿಕದಲ್ಲಿ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನವನ್ನು ಘೋಷಣೆ ಮಾಡಿದೆ.
2018ರ ಪಿಟ್ಸ್‌ಬರ್ಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೋಘ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದ ಮೇರು ಸಾಧನೆಗೆ “ಬ್ರಾಡ್ಕೊàಮ್ ಮಾಸ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿ’ ಗಳಿಸಿದ್ದ. 2018ರ ಐಆರ್‌ಐಎಸ್ ನ್ಯಾಶನಲ್ ಫೇರ್‌ನಲ್ಲಿ ಎಎಸ್‌ಎಂ ಅವಾರ್ಡ್ ಮತ್ತು ರಿಕೋ ಸಸ್ಟೆನೆಬಲ್ ಡೆವಲಪ್‌ಮೆಂಟ್ ಪ್ರಶಸ್ತಿ ಪಡೆದಿದ್ದ. ಈ ವರ್ಷದ ಎಪ್ರಿಲ್‌ನಲ್ಲಿ “ಇಸ್ರೋ ಯುವಿಕ’ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದ.