Advertisement
ಅವರು ರವಿವಾರ ಫರಂಗಿಪೇಟೆಯ ಅರ್ಕುಳದಲ್ಲಿ ಮಾನಸಿಕ ರೋಗ ಚಿಕಿತ್ಸಾ ತಜ್ಞ ಡಾ| ರವೀಶ ತುಂಗ ಐರೋಡಿ ನೇತೃತ್ವದ ಡಾ| ತುಂಗಾಸ್ ಮನಸ್ವಿನಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾನಸಿಕವಾಗಿಯೂ ಸದೃಢನಾಗಬೇಕು. ನಾನು ಆರೋಗ್ಯ ಸಚಿವನಾಗಿದ್ದಾಗ ಮಾನಸಿಕ ಆರೋಗ್ಯ ಸೇವೆಗೆ ವಿಶೇಷ ಗಮನ ನೀಡಿದ್ದೆ ಎಂದರು. ಮುಖ್ಯಅತಿಥಿಗಳಾಗಿ ತಮಿಳು ನಾಡಿನ ಮಾಜಿ ಆರೋಗ್ಯ ಸಚಿವ ಡಾ| ಎಚ್.ವಿ. ಹಂದೆ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ. ರಮಾನಾಥ ರೈ, ಪಲ್ಸ್ ಪೋಲಿಯೊ ಅಂತಾರಾಷ್ಟ್ರೀಯ ನಿರ್ದೇಶಕ ಡಾ| ಪಿ. ನಾರಾಯಣ, ಮಾನಸಿಕ ಆರೋಗ್ಯದ ಉಪನಿರ್ದೇಶಕಿ ಡಾ| ರಜನಿ ಪಾರ್ಥಸಾರಥಿ, ಮಂಗಳೂರು ವಿನಯ ಆಸ್ಪತ್ರೆಯ ನಿರ್ದೇಶಕ ಡಾ| ಹನ್ಸರಾಜ್ ಆಳ್ವ, ಮಂಗಳೂರು ವೈಟ್‌ಡೌಸ್‌ನ ನಿರ್ದೇಶಕ ಫಾ| ಆಲ್ವಿನ್ ಡಿಕುನ್ಹಾ, ದ.ಕ. ಡಿಎಚ್‌ಒ ಡಾ| ಎಚ್.ಆರ್.ತಿಮ್ಮಯ್ಯ, ಟಿಎಚ್‌ಒ ಡಾ| ಸುಜಯ ಭಂಡಾರಿ, ಮಾನಸಿಕ ಆರೋಗ್ಯದ ಸಂಯೋಜಕ ಡಾ| ಸುದರ್ಶನ್, ಪ್ರಮುಖರಾದ ಕೆ. ಕೃಷ್ಣಕುಮಾರ್ ಪೂಂಜ, ಉಮ್ಮರ್ ಫಾರೂಕ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ, ಸುರೇಂದ್ರ ಕಂಬಳಿ, ರಶೀದಾ ಬಾನು, ಅಬ್ದುಲ್ ಜಲೀಲ್, ಶಿವಪ್ಪ ಸುವರ್ಣ, ರಮ್ಲಾನ್ ಮಾರಿಪಳ್ಳ, ವೃಂದಾ ಪೂಜಾರಿ ಭಾಗವಹಿಸಿದ್ದರು.
Related Articles
ಆಸ್ಪತ್ರೆಯ ಅಧ್ಯಕ್ಷ ಡಾ| ರವೀಶ ತುಂಗ ಹಾಗೂ ಹೊಸದಿಲ್ಲಿಯ ಲ್ಯಾಟಿನ್ ಅಮೆರಿಕನ್ ಕ್ಯಾರಿಬಿನ್ ಟ್ರೇಡ್ ಕೌನ್ಸಿಲ್‌ನ ಟ್ರೇಡ್ ಕಮಿಷನರ್ ಡಾ| ಸೆನೊರಿಟಾ ಐಸಾಕ್ ಅವರು ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದರು. ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಆಸ್ಪತ್ರೆಯ ನಿರ್ಮಾಣಕ್ಕೆ ದುಡಿದವರನ್ನು ಸಮ್ಮಾನಿಸಲಾಯಿತು.
Advertisement
ಆಸ್ಪತ್ರೆಯ ಉಪಾಧ್ಯಕ್ಷೆ ಡಾ| ಸುಚಿತ್ರಾ ತುಂಗ, ಕೋಶಾಧಿಕಾರಿ ಎ. ವಿಶ್ವನಾಥ ತುಂಗ, ಕಾರ್ಯದರ್ಶಿ ನಾಗರಾಜ ತುಂಗ, ಟ್ರಸ್ಟಿ ಪ್ರೇರಣಾ ತುಂಗ, ವೈದ್ಯಕೀಯ ಅಧೀಕ್ಷಕ ಡಾ| ಅನಿರುದ್ಧ ಶೆಟ್ಟಿ ಉಪಸ್ಥಿತರಿದ್ದರು. ಆಸ್ಪತ್ರೆಯ ಅಧ್ಯಕ್ಷ ಡಾ| ರವೀಶ್ ತುಂಗ ಸ್ವಾಗತಿಸಿದರು. ಸುಮಂಗಲಾ ತುಂಗಾ ವಂದಿಸಿದರು. ಪ್ರಸನ್ನ ಹಾಗೂ ಲವಿಟಾ ಅವರು ಕಾರ್ಯಕ್ರಮ ನಿರ್ವಹಿಸಿದರು.
ಒಳ್ಳೆಯ ಸಂಸ್ಕಾರದಿಂದ ಸಮೃದ್ಧಿಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವ್ಯಕ್ತಿಗೆ ಒಳ್ಳೆಯ ಸಂಸ್ಕಾರ ಸಿಕ್ಕಾಗ ಸಮೃದ್ಧಿಯ ಜತೆಗೆ ಉತ್ತಮ ಆರೋಗ್ಯ ಸಿಗಲಿದ್ದು, ಪ್ರಕೃತಿಗೆ ಪೂರಕವಾಗಿ ನಿರ್ಮಾಣಗೊಂಡ ಮನಸ್ವಿನಿ ಆಸ್ಪತ್ರೆಯು ಅಮೃತ ಕಲಶದಂತೆ ಶೋಭಿಸುತ್ತಿದೆ ಎಂದರು.