Advertisement
ಭಾರತದ ಸನಾತನ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿಹೇಳಿದವರು ಶಂಕರಾಚಾರ್ಯರು.ಕೇವಲ 32 ವಯಸ್ಸಿಗೆ ಭಾರತದ ಮೂಲೆ ಮೂಲೆಗಳಿಗೆ ಸಂಚರಿಸಿ ಅದ್ವೆ„ತಸಿದ್ಧಾಂತವನ್ನು ಪ್ರತಿಪಾದಿಸಿ, ಅದನ್ನು ಜಗತ್ತಿಗೆ ಸಾರಿದ ಆದಿ ಶಂಕರರ ಜೀವನಬಾಲ್ಯ, ಯೌವ್ವನ ಮತ್ತು ನಿರ್ಗಮನದ ಅಪರೂಪದ ಸಂಗತಿಗಳು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿದೆಯಂತೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿದ್ದಾರೆ.
Related Articles
Advertisement
ಇನ್ನು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿ ಶಂಕರಾಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟರಾದ ರಾಮಕೃಷ್ಣ, ರಮೇಶಭಟ್, ಮಾ. ಲಿಖೀತ ಶರ್ಮಾ, ಮಾ. ಬಿ.ಪಿ. ರೋಹಿತ್ ಶರ್ಮಾಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆಸಿ. ನಾರಾಯಣಛಾಯಾಗ್ರಹಣ, ಆರ್.ದೊರೆರಾಜ್ (ಆರ್.ಡಿರವಿ) ಸಂಕಲನವಿದೆ.ಚಿತ್ರದ ಹಾಡುಗಳಿಗೆಅರ್ಜುನ್ ಜನ್ಯಸಂಗೀತ ಸಂಯೋಜಿಸಿದ್ದಾರೆ.
ಇದೇ ಜನವರಿ ತಿಂಗಳಲ್ಲಿ ಶೃಂಗೇರಿಯಲ್ಲಿ ಸೆಟ್ಟೇರಿದ್ದ “ಆಚಾರ್ಯ ಶ್ರೀ ಶಂಕರ’ ಚಿತ್ರದ ಚಿತ್ರೀಕರಣವನ್ನು ತೀರ್ಥಹಳ್ಳಿ, ಕುಂದಾಪುರ, ದೇವರಾಯನ ದುರ್ಗ ಮೊದಲಾದ ಕಡೆಗಳಲ್ಲಿ ನಡೆಸಲಾಗಿದೆ.