Advertisement
ತಾನು ಮಸ್ಕತ್‌ಗೆ ಆಗಮಿಸಿ ದೊಡ್ಡ ತಪ್ಪು ಮಾಡಿದೆನೇನೋ ಎಂಬ ಚಿಂತೆಯಲ್ಲಿದ್ದ ಶರತ್‌ಗೆ ಈಗ ದೊಡ್ಡದೊಂದು ರಿಲೀಫ್ ಸಿಕ್ಕಿದೆ. ಸೋಮವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ಗೆ ಒಳಗಾದ ಬಳಿಕ ಅವರು ತಮ್ಮ ಕುಟುಂಬವನ್ನು ಸೇರಿಕೊಂಡರು.
“ಕೊರೊನಾ ಕಾರಣದಿಂದ ಇದೇ ಅವಧಿಯಲ್ಲಿ ನಡೆಯಬೇಕಿದ್ದ ಪೋಲಿಶ್ ಓಪನ್ ಟೇಬಲ್ ಟೆನಿಸ್ ಕೂಟ ರದ್ದುಗೊಂಡ ಸುದ್ದಿ ತಿಳಿಯಿತು. ಆಗ ನಾನು ಮಸ್ಕತ್‌ಗೆ ಆಗಮಿಸಿಯಾಗಿತ್ತು. ಇಲ್ಲಿಗೆ ಬಂದು ತಪ್ಪು ಮಾಡಿದೆನೇನೋ ಅನಿಸಿತ್ತು. ನನಗೆ ಆಗ ಕುಟುಂಬದ ಚಿಂತೆ ಕಾಡಿತ್ತು. ಅವರಿಗೆ ನನ್ನ ಚಿಂತೆ ಎದುರಾಗಿತ್ತು. ಆದರೆ ನಾನು ಗಟ್ಟಿ ಮನಸ್ಸು ಮಾಡಿ ಗಮನವನ್ನೆಲ್ಲ ಆಟದಲ್ಲಿ ತೊಡಗಿಸಿಕೊಂಡೆ. ಹೀಗಾಗಿ ಪ್ರಶಸ್ತಿ ಎತ್ತಲು ಸಾಧ್ಯವಾಯಿತು’ ಎಂದು ಚೆನ್ನೈಗೆ ಬಂದ ಬಳಿಕ ಅವರು ಮಾಧ್ಯಮದವರಲ್ಲಿ ಹೇಳಿಕೊಂಡರು. “ಇದು ಒಲಿಂಪಿಕ್ಸ್ ಅರ್ಹತಾ ಕಾರಣಕ್ಕಾಗಿ ನನಗೆ ಮಹತ್ವದ ಕೂಟವಾಗಿತ್ತು. ಆದರೆ ಈಗ ಎಲ್ಲ ಕೂಟಗಳೂ ರದ್ದಾಗಿವೆ. ಹೀಗಾಗಿ ಗೆಲುವಿನ ಸಂಭ್ರಮವನ್ನು ಹೇಗೆ ಆಚರಿಸಬೇಕೆಂಬುದೇ ತಿಳಿಯದು’ ಎಂದಿದ್ದಾರೆ ಶರತ್ ಕಮಲ್.
“ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಅತ್ಯಂತ ಕಠಿನವಾಗಿದ್ದವು.
Related Articles
Advertisement
ದಶಕದ ಬಳಿಕ ಪ್ರಶಸ್ತಿರವಿವಾರ ರಾತ್ರಿ ಮಸ್ಕತ್‌ನಲ್ಲಿ ನಡೆದ “ಒಮಾನ್ ಓಪನ್’ ಫೈನಲ್‌ನಲ್ಲಿ ಅವರು ಪೋರ್ಚುಗೀಸ್‌ನ ಮಾರ್ಕೋಸ್ ಫ್ರೀಟಸ್ ವಿರುದ್ಧ 6-11, 11-8, 12-10, 11-9, 3-11, 17-15 ಅಂತರದ ರೋಚಕ ಜಯ ಸಾಧಿಸಿದರು. ಅಚಂತ ಶರತ್ ಕಮಲ್ 2010ರ ಬಳಿಕ ಗೆದ್ದ ಮೊದಲ ಜಾಗತಿಕ ಟಿಟಿ ಪ್ರಶಸ್ತಿ ಇದಾಗಿದೆ. ಅಂದು ಅವರು ಈಜಿಪ್ಟ್ ಓಪನ್ ಚಾಂಪಿಯನ್ ಆಗಿದ್ದರು. ಅನಂತರ 2 ವಿಶ್ವ ಕೂಟಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದೇ ಅವರ ಅತ್ಯುತ್ತಮ ಸಾಧನೆಯಾಗಿತ್ತು. 2011ರ ಮೊರೊಕ್ಕೊ ಓಪನ್ ಮತ್ತು 2017ರ ಇಂಡಿಯಾ ಓಪನ್ ಪಂದ್ಯಾವಳಿಯಲ್ಲಿ ಅವರು ಉಪಾಂತ್ಯದಲ್ಲಿ ಪರಾಭವಗೊಂಡಿದ್ದರು.
4ನೇ ಶ್ರೇಯಾಂಕದ ಶರತ್ ಸೆಮಿಫೈನಲ್‌ನಲ್ಲಿ ರಶ್ಯದ ಕಿರಿಲ್ ಸ್ಕಶೊRàವ್ ವಿರುದ್ಧ 2 ಗೇಮ್‌ಗಳ ಹಿನ್ನಡೆಯ ಬಳಿಕವೂ ಗೆದ್ದು ಬಂದಿದ್ದರು.