Advertisement

ಎಫ್ ಬಿ, ಪೊಲೀಸರ ಶ್ರಮದಿಂದ ಉಳಿಯಿತು ಜೀವ

12:45 AM Aug 11, 2020 | mahesh |

ಹೊಸದಿಲ್ಲಿ: ಫೇಸ್‌ಬುಕ್‌ ಸಿಬಂದಿಯ ಸಮಯಪ್ರಜ್ಞೆ ಮತ್ತು ಎಚ್ಚೆತ್ತ ಎರಡು ರಾಜ್ಯಗಳ ಪೊಲೀಸರ ಶ್ರಮದಿಂದಾಗಿ ಆರ್ಥಿಕ ಸಂಕಷ್ಟದಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬ ನಿರ್ಧಾರ ಬದಲಾಯಿಸಿಕೊಂಡ ಕತೆ ಇದು!

Advertisement

ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಸಿದ್ಧನಾಗಿದ್ದ ವ್ಯಕ್ತಿಯೊಬ್ಬನ ಜೀವ ಉಳಿಸುವಲ್ಲಿ ಫೇಸ್‌ಬುಕ್‌ ಸಿಬಂದಿ, ಮಹಾರಾಷ್ಟ್ರ ಮತ್ತು ದಿಲ್ಲಿ ಪೊಲೀಸರ ಯತ್ನ ಯಶಸ್ವಿಯಾಗಿದೆ.

ಮುಂಬಯಿಯಲ್ಲಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಕೆಲವು ವೀಡಿಯೋಗಳನ್ನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಿದ್ದ. ಅಯರ್ಲಂಡ್‌ನ‌ಲ್ಲಿರುವ ಫೇಸ್‌ಬುಕ್‌ ಕಚೇರಿಯ ಸಿಬಂದಿ ಇದನ್ನು ಗಮನಿಸಿ, ಆತನನ್ನು ಉಳಿಸುವ ಸಲುವಾಗಿ ರವಿವಾರ ಸಂಜೆ 7 ಗಂಟೆಗೆ ದಿಲ್ಲಿ ಸೈಬರ್‌ ವಿಭಾಗದ ಡಿಸಿಪಿ ಅನ್ಯೆಶ್‌ ರಾಯ್‌ ಅವರನ್ನು ಸಂಪರ್ಕಿಸಿದ್ದರು. ವ್ಯಕ್ತಿ ಆತ್ಮಹತ್ಯೆಗೆ ಚಿಂತಿಸುತ್ತಿರುವುದರ ಕುರಿತು ವಿವರಿಸಿ, ಆತನ ಫೇಸ್‌ಬುಕ್‌ ಅಕೌಂಟ್‌ನಲ್ಲಿದ್ದ ಮೊಬೈಲ್‌ ನಂಬರ್‌ ರವಾನಿಸಿದ್ದರು.

ದಿಲ್ಲಿಯಲ್ಲಿ ಪರಿಶೀಲನೆ
ನಂಬರ್‌ ಬಗ್ಗೆ ಪರಿಶೀಲನೆ ನಡೆಸಿದಾಗ ಅದು ಪೂರ್ವ ದಿಲ್ಲಿಯ ಮನೆಯದ್ದು ಎಂದು ವಿಳಾಸ ಪತ್ತೆ ಹಚ್ಚಲಾಯಿತು. ಬಳಿಕ ಅನ್ಯೆಶ್‌ ರಾಯ್‌ ಅವರು ಪೂರ್ವ ವಿಭಾಗದ ಪೊಲೀಸ್‌ ಅಧಿಕಾರಿ ಜಸ್ಮಿತ್‌ ಸಿಂಗ್‌ಗೆ ವಿಷಯ ತಿಳಿಸಿದರು. ಆ ವಿಳಾಸವಿದ್ದ ಮನೆಗೆ ಪೊಲೀಸರು ತೆರಳಿದಾಗ ವ್ಯಕ್ತಿಯ ಪತ್ನಿ ಮಾತ್ರ ಇದ್ದರು. ಆಕೆಗೆ ಪತಿ ಪೋಸ್ಟ್‌ ಮಾಡಿದ ವೀಡಿಯೋ ಬಗ್ಗೆ ಏನೂ ತಿಳಿದಿರಲಿಲ್ಲ. ಫೇಸ್‌ಬುಕ್‌ ಅಕೌಂಟ್‌ನಲ್ಲಿರುವ ನಂಬರ್‌ ನನ್ನದು. ಆದರೆ ಖಾತೆಯನ್ನು ನನ್ನ ಪತಿ ಬಳಸುತ್ತಿದ್ದಾರೆ. ಇತ್ತೀಚೆಗೆ ನನ್ನೊಂದಿಗೆ ಜಗಳವಾಡಿ ಮುಂಬಯಿಗೆ ಹೋಗಿದ್ದಾರೆ. ಅಲ್ಲಿ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ’ ಎಂದಿದ್ದಳಾಕೆ.

ಮುಂಬಯಿಯಲ್ಲಿ ಹುಡುಕಾಟ
ಡಿಸಿಪಿ ರಾಯ್‌, ರಾತ್ರಿ 9.30ಕ್ಕೆ ಮುಂಬಯಿ ಡಿಸಿಪಿ ಡಾ| ರಶ್ಮಿ ಅವರನ್ನು ಸಂಪರ್ಕಿಸಿದರು. ಆತನ ಪತ್ನಿ ಕೊಟ್ಟಿದ್ದ ನಂಬರ್‌ಗೆ ಕರೆ ಮಾಡಿ ದಾಗ ಸ್ವಿಚ್‌ಆಫ್ ಆಗಿತ್ತು. ಆಗ ಪೊಲೀಸರು ವ್ಯಕ್ತಿಯ ತಾಯಿಗೆ ಫೋನ್‌ ಮಾಡಿ, ಪುತ್ರನಿಗೆ ಕೂಡಲೇ ವಾಟ್ಸ್‌ ಆ್ಯಪ್‌ ವೀಡಿಯೋ ಕರೆ ಮಾಡುವಂತೆ ತಿಳಿಸಿದರು. ತಾಯಿ ಕರೆ ಮಾಡಿ ದಾಗ ಕಟ್ಟಾಯಿತು. ಪೊಲೀಸರು ಕರೆ ಮಾಡಿ, ದುಡುಕಿನ ನಿರ್ಧಾರ ಕೈಗೊಳ್ಳದಂತೆ ಮನವೊಲಿ ಸಿದರು. ತಡರಾತ್ರಿ 1.30ಕ್ಕೆ ಪೊಲೀಸರ ತಂಡ ಆತನಿದ್ದ ಸ್ಥಳವನ್ನು ಪತ್ತೆಹಚ್ಚಿ ಕೌನ್ಸೆಲಿಂಗ್‌ಗೆ ಒಳಪಡಿಸಿತು. ಆತ್ಮಹತ್ಯೆ ಯೋಚನೆಯಿಂದ ಹಿಂದೆಗೆವಂತೆ ಮಾಡುವಲ್ಲಿ ಯಶಸ್ವಿಯಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next