Advertisement

Gagan Kadur: ಶಿವಮೊಗ್ಗಕ್ಕೆ ಕರೆತಂದು ಆರೋಪಿ ಗಗನ್‌ ಕಡೂರು ಸ್ಥಳ ಮಹಜರು ನಡೆಸಿದ ಸಿಸಿಬಿ

06:21 PM Sep 19, 2023 | Team Udayavani |

ಶಿವಮೊಗ್ಗ: ಚೈತ್ರ ಕುಂದಾಪುರ ಉದ್ಯಮಿಯಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗಗನ್‌ ಕಡೂರು ಅವರನ್ನು ಮಂಗಳವಾರ (ಸೆ.19 ರಂದು) ಶಿವಮೊಗ್ಗಕ್ಕೆ ಕರೆತಂದು ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

Advertisement

ಆರೋಪಿ ಗಗನ್‌ ಕಡೂರು ಅವರನ್ನು ಶಿವಮೊಗ್ಗದ ಗೌಡ ಸಾರಸ್ವತ ಕಲ್ಯಾಣ ಮಂದಿರದ ಮಥುರ ಪ್ಯಾರಡೈಸ್ ರಸ್ತೆಯ ಬಳಿ ಕರೆತಂದು ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಇದೇ ಸ್ಥಳದಲ್ಲಿ ಉದ್ಯಮಿಯಿಂದ 50 ಲಕ್ಷ ರೂ ಗಳನ್ನು ಗಗನ್ ಕಡೂರು ಪಡೆದು ಚೈತ್ರ ಕುಂದಾಪುರಕ್ಕೆ ನೀಡಿದ್ದರು.

ಸಿಸಿಬಿ ಇನ್ಸಪೆಕ್ಟರ್ ಭರತ್  ಹಾಗೂ ಇಬ್ಬರು ಪೊಲೀಸರ ತಂಡ ಆಗಮಿಸಿ ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿ ಗಗನ್ ಕಡೂರು ರನ್ನು ನಿಲ್ಲಿಸಿ ಪೋಟೊ ತೆಗೆಸಿಕೊಂಡು ಸಿಸಿಬಿ ತಂಡ ಹೊರಟಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ(ಸೆ.19 ರಂದು) ಒಡಿಶಾದಲ್ಲಿ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next