ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಚ್‌ಎಎಲ್ ಏರ್‌ಪೋರ್ಟ್‌ಗೆ ತೆರಳುವಾಗ ಮಾರ್ಗ ಮಧ್ಯೆ ಬೈಕ್‌ನಲ್ಲಿ ರಸ್ತೆ ಪ್ರವೇಶಿಸಿ ಬೆಂಗಾವಲು ವಾಹನಗಳ ಹಿಂದೆ ತೆರಳಿದ್ದ ಇಬ್ಬರು ಯುವಕರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.
ನೀಲಸಂದ್ರದ ಆರ್.ಕೆ.ಗಾರ್ಡನ್ ನಿವಾಸಿಗಳಾದ ಇಮ್ರಾನ್ (21) ಮತ್ತು ಜಿಬ್ರಾನ್ (21) ಬಂಧಿಸಲಾಗಿದೆ. ಈ ಇಬ್ಬರು ಆರ್.ಟಿ.ನಗರದ ಕಾಲೇಜಿನಲ್ಲಿ 2ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಭಾನುವಾರ ರಾತ್ರಿ ಶಿವಾಜಿನಗರಕ್ಕೆ ವಾಹನ ರಿಪೇರಿ ಮಾಡಿಸಲು ಬಂದಿದ್ದು, ಸ್ನೇಹಿತರ ಜತೆ ಊಟ ಮುಗಿಸಿಕೊಂಡು, ರಾತ್ರಿ 11 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸದೆ ಹೋಗುತ್ತಿದ್ದರು.
ಅದೇ ವೇಳೆ ಕೇಂದ್ರ ಸಚಿವ ಅಮಿತ್ ಶಾ ಖಾಸಗಿ ಹೋಟೆಲ್‌ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಗೆ ತೆರಳಲು ಕಬ್ಬನ್ ರಸ್ತೆಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದತ್ತ ಹೊರಟ್ಟಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಇಮ್ರಾನ್ ಮತ್ತು ಜಿಬ್ರಾನ್ ಸಫಿನಾ ಪ್ಲಾಜಾ ಕಡೆಯಿಂದ ಏಕಮುಖ ರಸ್ತೆಯಲ್ಲಿ ಕಬ್ಬನ್ ರಸ್ತೆ ಕಡೆಗೆ ಬಂದಿದ್ದಾರೆ.
ಇದೇ ಸಮಯಕ್ಕೆ ಕಬ್ಬನ್ ರಸ್ತೆಯಲ್ಲಿ ಅಮಿತ್ ಶಾ ಹಾಗೂ ಬೆಂಗಾವಲು ವಾಹನಗಳು ತೆರಳುತ್ತಿದ್ದ ಹಿನ್ನೆಲೆ ಯಲ್ಲಿ ಪೊಲೀಸರು ಸಂಚಾರವನ್ನು ತಡೆದಿದ್ದರು. ಈ ವೇಳೆ ಸಂಚಾರ ಪೊಲೀಸರು ಇಮ್ರಾನ್ ಮತ್ತು ಜಿಬ್ರಾನ್ ತೆರಳುತ್ತಿದ್ದ ದ್ವಿಚಕ್ರ ವಾಹನ ತಡೆದರೂ, ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದುಕೊಂಡು ಕಬ್ಬನ್ ರಸ್ತೆ ಪ್ರವೇಶಿಸಿ ಬೆಂಗಾವಲು ವಾಹನಗಳ ಹಿಂದೆ ತೆರಳಿದ್ದಾರೆ. ಈ ವೇಳೆ ಮಣಿಪಾಲ್ ಸೆಂಟರ್ ಬಳಿ ಪೊಲೀಸರು ಇಬ್ಬರನ್ನು ತಡೆದು ವಶಕ್ಕೆ ಪಡೆದಿದ್ದರು. ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವುದು ಗೊತ್ತಿರಲಿಲ್ಲ. ಹೆಲ್ಮೆಟ್ ಧರಿಸದವರನ್ನು ಹಿಡಿಯುತ್ತಿದ್ದಾರೆ ಎಂದು ಭಾವಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಮೊಬೈಲ್ ಪರಿಶೀಲನೆ : ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಅವರ ಮೊಬೈಲ್ ಪರಿಶೀಲಿಸಲಾಗಿದೆ. ಯಾವುದೇ ಅನುಮಾನಾಸ್ಪದ ವಿಚಾರಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಭದ್ರತಾ ವೈಫಲ್ಯವಾಗಿರುವುದು ಕಂಡು