Advertisement

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

11:30 AM Nov 10, 2024 | Team Udayavani |

ಆನೇಕಲ್‌: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಮಲಗಿದ್ದ ಕಾರ್ಮಿಕ ಸಜೀವ ದಹನ ವಾಗಿದ್ದು, ಕೋಟ್ಯಂತರ ರೂ. ಮರ ಆಹುತಿಯಾಗಿ ರುವ ದಾರುಣ ಘಟನೆ ಯಡವನಹಳ್ಳಿ ಬಳಿಯ ಶ್ರೀರಾಮ ವುಡ್‌ ಕಾರ್ಖಾನೆಯಲ್ಲಿ ನಡೆದಿದೆ.

Advertisement

ತಾಲೂಕಿನ ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಯಡವನಹಳ್ಳಿ ಬಳಿ ಇರುವ ಪ್ರತಿಷ್ಠಿತ ಕಂಪನಿಗಳಿಗೆ ಸೋಫಾ, ಕುರ್ಚಿ ಹಾಗೂ ಮರಗಳ ಪೂರೈಸುತ್ತಿದ್ದ ಕಾರ್ಖಾನೆಯಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಉತ್ತರ ಪ್ರದೇಶ ಮೂಲದ ಗೋವಿಂದ್‌ (24)ಸಜೀವ ದಹನವಾಗಿದ್ದಾನೆ. ಎಕರೆಯಷ್ಟು ಜಾಗದಲ್ಲಿ ಶೇಖರಿಸಿಟ್ಟಿದ್ದ 5 ಕೋಟಿ ರೂ.ನ ಮರದ ವಸ್ತುಗಳು, ಮಿಷನರಿಗಳು ಬೆಂಕಿಗೆ ಆಹುತಿಯಾಗಿವೆ. ಕಾರ್ಖಾನೆಯ ಪಕ್ಕದ ಶೆಡ್‌ನ‌ಲ್ಲಿ 25ಕ್ಕೂ ಹೆಚ್ಚು ಕಾರ್ಮಿಕರು ಮಲಗಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಎದ್ದು ಹೊರಗಡೆ ಓಡಿದ್ದಾರೆ. ಆದರೆ, ಪ್ರಸ್ಸಿಂಗ್‌ ಯಂತ್ರದ ಬಳಿ ಗೋವಿಂದ ಕುಸಿದು ಬಿದ್ದಿದ್ದು, ಹೊರಗೆ ಬರಲಾಗದೇ ಸುಟ್ಟು ಹೋಗಿದ್ದಾನೆ. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಮಾಲಿಕ ಹರ್ಷದ್‌ ಪಾಟೀಲ್‌ ವಿರುದ್ಧ ಕೇಸು ದಾಖಲಾಗಿದ್ದು, ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕತನಿಖೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ನಿಂದ ಘಟನೆ ಆಗಿರಬಹುದು ಎಂದು ಅಗ್ನಿಶಾಮಕ ದಳದ ನಿರ್ದೇಶಕ ಶಿವಶಂಕರ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next