Advertisement

ಮಣಿಪಾಲದಲ್ಲಿ ಅಪಘಾತ ರಿಕ್ಷಾ ಢಿಕ್ಕಿ: ನರ್ಸಿಂಗ್‌ ಅಧೀಕ್ಷಕಿ ಸಾವು

02:53 AM Apr 30, 2019 | Team Udayavani |

ಉಡುಪಿ: ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.

Advertisement

ಮಣಿಪಾಲ ಸರಳೇಬೆಟ್ಟು ನಿವಾಸಿ ವಿನಯಾ ಮಾರ್ಗರೇಟ್‌ ಮಾಬೆನ್‌ (54) ಮೃತಪಟ್ಟವರು. ರವಿವಾರ ಈಶ್ವರ ನಗರದ ಉಮಾಮಹೇಶ್ವರಿ ದೇವಸ್ಥಾನದ ತಿರುವು ಬಳಿ ನಡೆದುಕೊಂಡು ಹೋಗುತ್ತಿದ್ದಾಗ ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಅವರು ಸೋಮವಾರ ಮೃತಪಟ್ಟಿದ್ದಾರೆ.
1988ರಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಆಗಿ ವೃತ್ತಿಜೀವನವನ್ನು ಆರಂಭಿಸಿದ್ದ ಅವರು ವಾರ್ಡ್‌ ಸಿಸ್ಟರ್‌ ಆಗಿ, ಪ್ರಸ್ತುತ ಅಸಿಸ್ಟೆಂಟ್‌ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಆಗಿದ್ದರು. ಮೃತರು ಪತಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

ಉಡುಪಿ-ಮಣಿಪಾಲ ರಸ್ತೆಯ (ರಾ. ಹೆ. 169ಎ) ಕಡಿಯಾಳಿಯಲ್ಲಿ ಮಾ.4ರಂದು ರಿಕ್ಷಾ ಢಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟಿದ್ದರು. ಮಾ.16ರಂದು ಇದೇ ರಸ್ತೆಯ ಮಣಿಪಾಲದಲ್ಲಿ ರಿಕ್ಷಾ ಢಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next