ಹೊಸದಿಲ್ಲಿ : ಮಥುರಾ ಬಳಿಯಿರುವ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಕಂಟೇನರ್‌ಗೆ ಕಾರು ಢಿಕ್ಕಿಯಾಗಿ ಎಮ್ಸ್‌ನ ಮೂವರು ವೈದ್ಯರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಭಾನುವಾರ ನಸುಕಿನ 2.30 ರ ವೇಳೆ ನಡೆದಿದೆ.
ವರದಿಯಾದಂತೆ ದೆಹಲಿಯಿಂದ ಆಗ್ರಾಕ್ಕೆ ವೈದ್ಯರು ಸಹುದ್ಯೋಗಿಯೋರ್ವರ ಜನ್ಮ ದಿನದ ಸಂಭ್ರಮಾಚರಣೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರು ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಅತೀ ವೇಗದಲ್ಲಿ ಚಲಾಯಿಸುತ್ತಿದ್ದುದೇ ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಯಾಗಿದ್ದು, ಮೂವರನ್ನೂ ಮಥುರಾ ಆಸ್ಪತ್ರೆಯಿಂದ ಏಮ್ಸ್‌ಗೆ ಕರೆದೊಯ್ಯಲಾಗಿದೆ.
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.