Advertisement

ರಬಕವಿ-ಬನಹಟ್ಟಿ : ಕಾರು-ಬೈಕ್ ಢಿಕ್ಕಿ; ಓರ್ವ ಸಾವು, ಮತ್ತೋರ್ವ ಗಂಭೀರ

12:28 PM Apr 12, 2022 | Team Udayavani |

ರಬಕವಿ-ಬನಹಟ್ಟಿ : ಕಾರು-ಬೈಕ್ ಮಧ್ಯ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಮತ್ತೋರ್ವ ಗಂಭೀರವಾಗಿರುವ ಘಟನೆ ಮಹಾಲಿಂಗಪುರ ಮಾರ್ಗದಲ್ಲಿ ನಡೆದಿದೆ.

Advertisement

ಕಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸುನೀಲ ಮಗದುಮ್(36) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರ ಪರಪ್ಪ ಉಳ್ಳಾಗಡ್ಡಿಗೆ ಗಂಭೀರ ಪೆಟ್ಟು ಬಿದ್ದ ಕಾರಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ:ಯಳಂದೂರು: ಬಸ್‍ಗೆ ಬೈಕ್ ಢಿಕ್ಕಿ: ಮೂವರು ಗಂಭೀರ

ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಜೆ. ಕರುಣೇಶಗೌಡ ಹಾಗು ಪಿಎಸ್‌ಐ ಸುರೇಶ ಮಂಟೂರ ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next