ವಿಜಯನಗರ: ವೈದನ ಕಾರು ಢಿಕ್ಕಿ, ಬೈಕ್ ಸವಾರ ಮೃತಪಟ್ಟ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಹುಣಸಿ ಗ್ರಾಮದ ಬಳಿ ಗುರುವಾರ ರಾತ್ರಿ ನಡೆದಿದೆ.
ಬೈಕ್ ಸವಾರ ಶಂಕರಪ್ಪ ಗೊಲ್ಲರ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನಿಕಲ್ಲಿನಿಂದ ಹಗರಿಬೊಮ್ಮನಹಳ್ಳಿ ಬರುತ್ತಿದ್ದ ವೇಳೆ ವೈದ್ಯ ರಾಜೇಶ ನಾಯಕ್ ಅವರ ಕಾರು ಬೈಕ್ ಗೆ ಢಿಕ್ಕಿ ಹೊಡೆದು ಈ ಘಟನೆ ನಡೆದಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಬಸವರಾಜ್ ಗೆ ಗಂಭೀರ ಗಾಯಗೊಂಡಿದೆ.
ಮೊದಲಿಗೆ ವೈದ್ಯ ರಾಜೇಶ ನಾಯಕ್ ವಿರುದ್ದ ಮೃತರ ಸಂಬಂಧಿಕರು ದೂರು ನೀಡಲು ಮುಂದಾರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ವೈದ್ಯ ರಾಜೇಶ ನಾಯಕ್ ಶಾಸಕರೊಬ್ಬರ ದೂರದ ಸಂಬಂಧಿ ಆಗಿರುವುದರಿಂದ, ಪ್ರಕರಣವನ್ನು ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಮೃತನ ಸಂಬಂಧಿಕರು ಮಾಡುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.