Advertisement

ದಾಂಡೇಲಿ: ಇನೊವಾ ಕಾರು ಮತ್ತು ಅಟೋ ಡಿಕ್ಕಿ

01:43 PM Dec 20, 2021 | Team Udayavani |

ದಾಂಡೇಲಿ: ಇನೊವಾ ಕಾರು ಮತ್ತು ಅಟೋ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ದಾಂಡೇಲಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಬರುವ ಆಲೂರು ಮತ್ತು ಕರ್ಕಾ ಮಧ್ಯೆ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ಹಳಿಯಾಳದ ಕಡೆಯಿಂದ ಬರುತ್ತಿದ್ದ ಕೆಎ 31, 7469 ವಾಹನ ಸಂಖ್ಯೆಯ ಇನೊವಾ ಕಾರು ಮತ್ತು ದಾಂಡೇಲಿ ಕಡೆಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಕೆಎ 25, ಎಎ 1508 ಸಂಖ್ಯೆಯ ಅಟೋ ರಿಕ್ಷಾ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಇನೊವಾದಲ್ಲಿದ್ದ ದಾಂಡೇಲಿ ನಗರ ಸಭೆಯ ಸದಸ್ಯ ಮಹಾದೇವ ಜಮಾದಾರ ಅವರಿಗೆ ಹಾಗೂ ಚಾಲಕ ಚೆನ್ನಯ್ಯನವರಿಗೆ ಗಾಯವಾಗಿದೆ.

ಅಟೋದಲ್ಲಿದ್ದ ಹುಬ್ಬಳ್ಳಿಯ ನಿವಾಸಿಗಳಾದ ಮಹಮ್ಮದ್ ಅಜೀಮ್ ಮತ್ತು ತನ್ವೀರ್ ಎಂಬಿಬ್ಬರಿಗೆ ಗಾಯವಾಗಿದೆ. ಗಾಯಗೊಂಡ ನಾಲ್ವರನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನು ಧಾರವಾಡ ಸಿವಿಲ್ ಆಸ್ಪತ್ರೆಗೆ ಕಳಹಿಸಿಕೊಡುವ ಸಾಧ್ಯತೆಯಿದೆ.

ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next