Advertisement

ಉಡುಪಿ ಸಂತೆಕಟ್ಟೆ: ಹೆದ್ದಾರಿಯಲ್ಲಿ ಭೀಕರ ಅಪಘಾತ

11:29 AM Jul 15, 2018 | Team Udayavani |

*ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹಾರಿಬಂದ ಕಾರು
*ಹೊಂಡ ತಪ್ಪಿಸಲು ಹೋಗಿ ಅಪಘಾತ 
*ಕಾರು ಚಾಲಕ, ಟೆಂಪೋ ಚಾಲಕ ಸ್ಥಳದಲ್ಲೇ ಸಾವು

Advertisement

ಉಡುಪಿ: ರಾ.ಹೆ. 66ರ ಕಲ್ಯಾಣಪುರ ಸಂತೆಕಟ್ಟೆ ಸೇತುವೆ ಬಳಿ ಶ್ರೀ ಮಡಿಮಲ್ಲಿಕಾರ್ಜುನ ದೇವಸ್ಥಾನದ ಎದುರು ಶನಿವಾರ ಕಾರು – ಟೆಂಪೋ ನಡುವೆ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಟೆಂಪೊ ಚಾಲಕ ಕೊರಂಗ್ರಪಾಡಿ ಬೈಲೂರಿನ ಸುಂದರ ಶೆಟ್ಟಿಗಾರ್‌ (50) ಮತ್ತು ಬ್ರಹ್ಮಾವರ ಹಾರಾಡಿಯ ದಿ|  ಗಣಪತಿ ಹೆಗ್ಡೆ ಅವರ ಪುತ್ರ, ಕಾರಿನ ಚಾಲಕ ಬಯೋಟೆಕ್‌ ಎಂಜಿನಿಯರ್‌ ಶ್ರವಣ್‌ ಜಿ. ಹೆಗ್ಡೆ  (28) ಮೃತಪಟ್ಟವರು. ಟೆಂಪೋದಲ್ಲಿದ್ದ ಗಣೇಶ್‌ ಮತ್ತು ಶಿವರಾಜ್‌ ಗಾಯಗೊಂಡಿದ್ದಾರೆ.

ಡಿವೈಡರ್‌ ಏರಿ ಬಂದ ಕಾರು !
ಮಣಿಪಾಲದಿಂದ ಹಾರಾಡಿಗೆ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ ಜಿಗಿದು ರಸ್ತೆಯ ಇನ್ನೊಂದು ಬದಿಯಲ್ಲಿ ಎದುರಿನಿಂದ ಬರುತ್ತಿದ್ದ ಟೆಂಪೋಗೆ ಢಿಕ್ಕಿ ಹೊಡೆಯಿತು. ಕಾರು, ಟೆಂಪೋ ಚಾಲಕರು ಸ್ಥಳದಲ್ಲೇ ಮೃತಪಟ್ಟರು.ಟೆಂಪೋದಲ್ಲಿದ್ದ ಇಬ್ಬರು ಗಾಯಗೊಂಡರು.

ಹೊಂಡ ತಪ್ಪಿಸಲು?
ಹೊಂಡ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಬಲ ಬದಿಗೆ ತಿರುಗಿ ಡಿವೈಡರ್‌ ಹಾರಿ ಬಂದು ಢಿಕ್ಕಿ
ಹೊಡೆದಿದೆ. ಟೆಂಪೋದ ಹಿಂದಿನಿಂದ ಬರುತ್ತಿದ್ದ ಆಮ್ನಿ ಚಾಲಕ ದೇವಸ್ಥಾನ ರಸ್ತೆಗೆ ಚಲಾಯಿಸಿ ಪಾರಾಗಿದ್ದಾರೆ. ಅರ್ಧ ತಾಸು ಹೆದ್ದಾರಿ ಸಂಚಾರ ಸ್ಥಗಿತಗೊಂಡಿತು. ಆ್ಯಂಬುಲೆನ್ಸ್‌ ಕೂಡ ಸಿಲುಕಿತ್ತು.

ದಾಖಲೆ ತಿದ್ದುಪಡಿಗೆ ಬಂದಿದ್ದರು
ದಿ| ಗಣಪತಿ ಹೆಗ್ಡೆ ಮತ್ತು ಉಷಾ ಜಿ. ಹೆಗ್ಡೆ ದಂಪತಿಯ ಪುತ್ರ ಶ್ರವಣ್‌ ಜಿ. ಹೆಗ್ಡೆ ಬೆಂಗಳೂರಿನಲ್ಲಿ ಬಯೋಟೆಕ್‌ ಎಂಜಿನಿಯರ್‌ ಆಗಿದ್ದು ಅವಿವಾಹಿತ. ಒಬ್ಬ ಅಣ್ಣ ಅಬುಧಾಬಿಯಲ್ಲಿದ್ದಾರೆ. ಶ್ರವಣ್‌ ಬೆಂಗಳೂರಿನಲ್ಲಿ ತಾಯಿ ಜತೆ ನೆಲೆಸಿದ್ದರು. ಮತ್ತೂಬ್ಬ ಅಣ್ಣನೂ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ತಂದೆ ಮೃತಪಟ್ಟಿರುವುದರಿಂದ ಅವರ ಹೆಸರಿನ ಜಾಗದ ದಾಖಲೆಗಳ ತಿದ್ದುಪಡಿ ಪ್ರಯುಕ್ತ ಉಷಾ ಹೆಗ್ಡೆ ಮತ್ತು ಮೂವರು ಮಕ್ಕಳು ಹೊರಟಿದ್ದರು. ಸುಂದರ ಶೆಟ್ಟಿಗಾರ್‌ ಮನೆಗೆ ಶಾಸಕ ರಘುಪತಿ ಭಟ್‌ ಭೇಟಿ ನೀಡಿದರು. ಹೊಂಡ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಘಟನೆಗೆ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ ಎಂದು ಜಿಲ್ಲಾಧಿಕಾರಿ ಸೂಚನೆಯಂತೆ ದೂರು ದಾಖಲಾಗಿದೆ.

Advertisement

ಹಿಂದಿನಿಂದ ಬರುವೆ ಅಂದಿದ್ದ ಶ್ರವಣ್‌ 
ಶ್ರವಣ್‌, ಉಷಾ ಜಿ. ಹೆಗ್ಡೆ ಮತ್ತು ಬೆಂಗಳೂರಿನಲ್ಲಿದ್ದ ಅಣ್ಣ ಜತೆಯಾಗಿ ಬಸ್‌ನಲ್ಲಿ ಊರಿಗೆ ಬರುವುದೆಂದು ನಿರ್ಧರಿಸಿದ್ದರು. ಆದರೆ ಶ್ರವಣ್‌ “ನನಗೆ ಕಚೇರಿಯಲ್ಲಿ ಕೆಲಸವಿದೆ. ತಡವಾಗುತ್ತದೆ. ನೀವು ಮುಂದೆ ಹೊರಡಿ’ ಎಂದು ತಾಯಿ ಮತ್ತು ಅಣ್ಣನನ್ನು ಜು. 13ರಂದು ಒಂದು ಬಸ್‌ನಲ್ಲಿ ಕಳುಹಿಸಿ ತಾನು ಕೆಲ ಹೊತ್ತಿನ ಬಳಿಕ ಹಿಂದಿನ ಬಸ್‌ನಲ್ಲಿ ಬಂದಿದ್ದರು. ಮಣಿಪಾಲದಲ್ಲಿ ಇಳಿದು ಗೆಳೆ
ಯನ ಕಾರನ್ನು ಪಡೆದು ಮನೆ ಕಡೆಗೆ ಹೊರಟಿದ್ದರು. ಅಬುಧಾಬಿಯಲ್ಲಿರುವ ಅಣ್ಣ ಕೂಡ ಜು. 13ರಂದು ರಾತ್ರಿ ಹೊರಟು ಬಂದಿದ್ದಾರೆ.

ಶ್ರಮಜೀವಿ ಸುಂದರಣ್ಣ
ಕೊರಂಗ್ರಪಾಡಿ ಬೈಲೂರಿನ ಸುಂದರ ಶೆಟ್ಟಿಗಾರ್‌ ಅವರು ಉಡುಪಿ ಚಿತ್ತರಂಜನ್‌ ಸರ್ಕಲ್‌ ಬಳಿ ಟೆಂಪೋ ಸ್ಟಾ ಡ್‌ನ‌ಲ್ಲಿದ್ದು ಸರಿಸುಮಾರು 30 ವರ್ಷಗಳಿಂದ ಬಾಡಿಗೆ ಮಾಡು ತ್ತಿದ್ದರು. ಜು. 14ರಂದು ಬೆಳಗ್ಗೆ ಉಗ್ಗೆಲ್‌ಬೆಟ್ಟು ಕಡೆಗೆ ಸೆಂಟ್ರಿಂಗ್‌ ಸಾಮಗ್ರಿ ಸಾಗಿಸಿ ಕಾರ್ಮಿಕರೊಂದಿಗೆ ವಾಪಸಾಗುತ್ತಿದ್ದರು. ಬಾಡಿಗೆ ವಾಹನದ ಆದಾಯದಿಂದಲೇ ಬದುಕು ಸಾಗಿಸುತ್ತಿದ್ದ ಅವರ ಓರ್ವ ಪುತ್ರ ಎಸೆಸೆಲ್ಸಿ, ಇನ್ನೋರ್ವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next