ಪಡುಬಿದ್ರಿ: ಬಂಟರ ಭವನದ ಎದುರು ಮೇ 11ರ ರಾತ್ರಿ ಕಾರು ಢಿಕ್ಕಿ ಹೊಡೆದು ಪಾದಚಾರಿ, ಪಡುಬಿದ್ರಿ ಕನಪುಕೋಟಿ ನಿವಾಸಿ ಲೋಕನಾಥ ಜತ್ತನ್ (73) ಅವರು ಸಾವನ್ನಪ್ಪಿದ್ದಾರೆ.
ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನೆಯಿಂದ ನಡೆದುಕೊಂಡು ಬಂದಿದ್ದ ಅವರು ಹೆದ್ದಾರಿ ದಾಟಲು ಡಿವೈಡರ್ ಬಳಿ ನಿಂತಿದ್ದರು. ಆಗ ಉಡುಪಿ ಕಡೆಯಿಂದ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರಭಸದಿಂದ ರಸ್ತೆಗೆಸೆಯಲ್ಪಟ್ಟ ಲೋಕನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.