ಕುಷ್ಟಗಿ: ಕಾರೊಂದು ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇನ್ನೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಾವರಗೇರಿ ಕುಷ್ಟಗಿ ರಸ್ತೆಯ ಮದ್ಯದಲ್ಲಿ ಬರುವ ಹಂಚಿನಾಳ ಗ್ರಾಮದ ಬಳಿ ರವಿವಾರ ನಡೆದಿದೆ.
ಮೃತರನ್ನು ಕಾರಟಗಿಯ ಪ್ರವೀಣಕುಮಾರ ಹಿರೇಮಠ, ಉಮೇಶ ಕನಕಪ್ಪ ಮಾದರ ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಇದ್ದವರು ಸಿಂದಗಿಯಲ್ಲಿ ಮದುವೆ ಮುಗಿಸಿ ಊರಿಗೆ ವಾಪಾಸಾಗುತ್ತಿದ್ದಾಗ ಮುಂದೆ ಬರುತ್ತಿದ್ದ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಟ್ರಾಕ್ಟರ್ ನಲ್ಲಿದ್ದ ಹಿರೇಮನ್ನಾಪೂರ ಗ್ರಾಮದ ಕಾರ್ಮಿಕ ಉಮೇಶ ಕನಕಪ್ಪ ಮಾದರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಾಗ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾನೆ.
ಈ ಕುರಿತು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಪೋಲಿಸರು ನಡೆದಿದ್ದಾರೆ.