Advertisement

ಕಡಬ: ನಿಯಂತ್ರಣ ತಪ್ಪಿ ಕಿರು ಸೇತುವೆಯ ತಡೆಗೋಡೆಗೆ ಕಾರು ಢಿಕ್ಕಿ; ಓರ್ವ ಸಾವು, ಇಬ್ಬರು ಗಂಭೀರ

05:01 PM Jun 06, 2022 | Team Udayavani |

ಕಡಬ: ಕಾರೊಂದು ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರು ಘಟನೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಸೋಮವಾರ ( ಜೂ.6 ರಂದು) ನಡೆದಿದೆ.

Advertisement

ರಾಮನಗರದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಓವರ್‌ ಟೇಕ್‌ ಭರದಲ್ಲಿ ಬೈಕ್‌ ಗಳ ಮುಖಾಮುಖಿ ಢಿಕ್ಕಿ; ಲಾರಿಯಡಿಗೆ ಸಿಕ್ಕಿ ಸವಾರಿಬ್ಬರು ಸಾವು

ಇನ್ನುಳಿದಂತೆ ಇಬ್ಬರು ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.

ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next