ಹೊಸಕೋಟೆ: ಕಾರು ಹಾಗೂ ಲಾರಿ ಮುಖಾಮುಖೀ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ.
ಹೊಸಕೋಟೆ ತಾಲೂಕು ರಾಷ್ಟ್ರೀಯ ಹೆದ್ದಾರಿ 75ರ ಗೋಟ್ಟಿಪುರ ಅಟ್ಟೂರಿ ಮಧ್ಯೆ ಈ ಘಟನೆ ನಡೆದಿದ್ದು, ಹೊಸಕೋಟೆ ತಾಲೂಕಿನ ನಿಡಘಟ್ಟ ಗ್ರಾಮದ ಸುಧಾಕರ್ (19) ಹಾಗೂ ದಾಸರಹಳ್ಳಿ ಮೋಹನ್ (21) ಮೃತ ದುರ್ದೈವಿಗಳು.
ಬೆಂಗಳೂರು ಕಡೆಯಿಂದ ಕೋಲಾರದ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮತ್ತೂಂದು ಭಾಗದಲ್ಲಿ ಚಲ್ಲಿಸುತ್ತಿದ್ದ ಲಾರಿಗೆ ಮುಖಾಮುಖೀ ಢಕ್ಕಿಯಾಗಿದೆ. ಈ ವೇಳೆ ಲಾರಿಗೆ ಕಾರು ಸಿಲುಕಿ ಸುಮಾರು ದೂರ ಎಳೆದೊಯ್ದಿದೆ.
ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ಎಸ್‌ಪಿ ಭೇಟಿ ನೀಡಿದ್ದು, ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.