Advertisement

Accident: ಬಾಲಕಿಗೆ ದ್ವಿಚಕ್ರ ವಾಹನ ಢಿಕ್ಕಿ, ಗಾಯ

08:31 PM Apr 05, 2023 | Team Udayavani |

ಬೆಳ್ತಂಗಡಿ: ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜತೆ ಕಾಯುತ್ತಿದ್ದ ಪುಟ್ಟ ಬಾಲಕಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಬಾಲಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಎ.4 ರಂದು ವರದಿಯಾಗಿದೆ.

Advertisement

ಲಾೖಲ ಗ್ರಾಮದ ಅಂಕಾಜೆ ಮನೆ ಸುಮಲತಾ ಎಂಬವರ ಪುತ್ರಿ ಸಾತ್ವಿಕಾ (7) ಗಾಯಗೊಂಡಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಡ್ಲಾಡಿ ಕಡೆಯಿಂದ ಲಾೖಲ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಸಾತ್ವಿಕಾಳಿಗೆ ಢಿಕ್ಕಿ ಹೊಡೆದನೆನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಸಾತ್ವಿಕಾ ಅಲ್ಲಿಯೇ ರಸ್ತೆಗೆ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next