Advertisement

ಬೆಲೆಯೇರಿಕೆಯಾಗುತ್ತಿದ್ದರೂ ‘ಅಚ್ಚೇ ದಿನ್ ಆಯೇಗಾ’ ಎಂದು ಬಿಜೆಪಿ ಭಕ್ತರ ಜಪ: ಕಾಂಗ್ರೆಸ್

01:12 PM Jun 12, 2021 | Team Udayavani |

ಹುಣಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿರುವ  ವಿರುದ್ಧ ಹುಣಸೂರು ಕಾಂಗ್ರೆಸ್ ಸಮಿತಿಯು ಶಾಸಕ ಎಚ್ ಪಿ ಮಂಜುನಾಥ್ ರವರ ನೇತೃತ್ವದಲ್ಲಿ ನಗರದ ಸಂವಿಧಾನ  ವೃತ್ತದ ಪೆಟ್ರೋಲ್ ಬಂಕ್ ಮುಂಭಾಗ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು.

Advertisement

ಈ ವೇಳೆ ಶಾಸಕ ಎಚ್ ಪಿ ಮಂಜುನಾಥ್ ಮಾತನಾಡಿ  ಕೇಂದ್ರ ಸರ್ಕಾರವು ದಿನದಿಂದ ದಿನಕ್ಕೆ ತೈಲ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ತೈಲ ಬೆಲೆ ಜೊತೆ ಅಡಿಗೆ ಎಣ್ಣೆ ಸೇರಿದಂತೆ ದಿನನಿತ್ಯ ವಸ್ತುಗಳನ್ನು ಬೆಲೆ ಏರಿಕೆ ಮಾಡುತ್ತಿರುವುದು ದುರದೃಷ್ಟಕರ. ಅಧಿಕಾರಕ್ಕೆ ಬರುವ ಮೊದಲು  ಬಿಜೆಪಿಯ ಅಂದ ಭಕ್ತರು ಮೋದಿಗೆ ಜೈ, ಬಿಜೆಪಿಗೆ ಜೈ ಎನ್ನುತ್ತಿದ್ದು ಈಗ ಅಧಿಕಾರಕ್ಕೆ ಬಂದ 7 ವರ್ಷದಿಂದಲೂ  ಎಲ್ಲಾ ವಸ್ತುಗಳಿಗೆ ಬೆಲೆ ಏರಿಕೆ ಮಾಡುತ್ತಿದ್ದರೂ   ಬಿಜೆಪಿ ಅಂದ ಭಕ್ತರು ಈಗ ಕಣ್ಮುಚ್ಚಿ ಕುಳಿತು *ಅಚ್ಚೆ ದಿನ್ ಆಯೆಗಾ ಎಂದು ಕಣ್ಮುಚ್ಚಿ   ಕುಳಿತಿರುವುದು ದುರದೃಷ್ಟಕರ ಎಂದು ತಿಳಿಸಿ  ಕರೋನಾ ಸಂಕಷ್ಟ ನಡುವೆ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ಪರ ಮೊದಲಿನಿಂದಲೂ ನಿಂತಿದ್ದು  ಈಗ ಹುಣಸೂರಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪ್ತಿ ಕಾಂಗ್ರೆಸ್ ಪಕ್ಷವು ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ ಹೋರಾಟ ಮಾಡಲಿದೆ ಎಂದು ತಿಳಿಸಿದರು.

ನಂತರ ಪ್ರತಿಭಟನಾ ಸ್ಥಳದಿಂದ ಕಾಂಗ್ರೆಸ್ ಪಕ್ಷದ ಕಚೇರಿವರೆಗೂ ಸೈಕಲ್ ನಲ್ಲಿ ಪ್ರಯಾಣ ಬೆಳೆಸಿ ಪ್ರತಿಭಟನೆಗೆ ಸಾಥ್ ನೀಡಿದರು

ಈ ವೇಳೆ ನಗರಸಭೆ ಅಧ್ಯಕ್ಷರಾದ ಅನುಷಾ ರಘು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರುಗಳಾದ ರಮೇಶ್ ,ನಾರಾಯಣ, ದೇವರಾಜ್ ಕಾರ್ಯಾಧ್ಯಕ್ಷ ಕೆಂಪೇಗೌಡ ಮುಖಂಡರಾದ ಹಂದನಹಳ್ಳಿ ಸೋಮಶೇಖರ್ ಉದ್ಯಮಿ ಅಮರನಾಥ್ ಕಲ್ಕುಣಿಕೆ ಶ್ರೀನಿವಾಸ್ ಸೇರಿದಂತೆ  ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ನಗರಸಭೆ ಸದಸ್ಯರು ಗ್ರಾಮ ಪಂ ಸದಸ್ಯರು ಯುವಕಾಂಗ್ರೆಸ್ ಹಾಗೂ ಮಹಿಳಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು  ಸ್ನೇಹಜೀವಿ  ಬಳಗ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next