Advertisement
ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಜೊತೆಗೆ ಈ ವರ್ಷದಿಂದ ಒಂದು ವರ್ಷ ಅವಧಿಯ ಪಿ.ಜಿ.ಡಿಪ್ಲೊಮಾ, ಡಿಪ್ಲೊಮಾ ಹಾಗೂ ಆರು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸುತ್ತಿರುವುದಾಗಿ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.
Related Articles
Advertisement
ಡಿಪ್ಲೊಮಾ ಕೋರ್ಸ್‌ಗಳು: ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಆ್ಯಂಡ್ ಹೆಲ್ತ್ ಎಜುಕೇಷನ್,ಇನ್ಫಾಮೇಷನ್ ಸೈನ್ಸ್, ಕಂಪ್ಯೂಟರ್ ಅಪ್ಲೀಕೇಷನ್.
ಸರ್ಟಿಫಿಕೇಟ್ ಕೋರ್ಸ್‌ಗಳು: ಕನ್ನಡ, ಪಂಚಾಯತ್ ರಾಜ್ ವ್ಯವಸ್ಥೆ, ಆಹಾರ ಮತ್ತು ಪೌಷ್ಠಿಕತೆ.ಆನ್‌ಲೈನ್ ಅರ್ಜಿ: ಈ ವರ್ಷ ಎಲ್ಲಾ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಪ್ರವೇಶಾತಿ ಪಡೆಯಲು ಆ.31 ಕೊನೆಯ ದಿನಾಂಕ. ವಿದ್ಯಾರ್ಥಿಗಳು ಪ್ರವೇಶಾತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysore.karnatake.gov.in ನಿಂದ ಪಡೆಯಬಹುದಾಗಿದೆ. ಪ್ರೊಸೆಸಿಂಗ್ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಅರ್ಜಿಯನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಿದ ನಂತರ ಅದರ ಒಂದು ಪ್ರತಿಯನ್ನು ಪ್ರಿಂಟ್ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದಾದರೊಂದು ಪ್ರಾದೇಶಿಕ ಕೇಂದ್ರ ಅಥವಾ ಮುಕ್ತ ವಿವಿ ವಿಭಾಗಗಳ ಮುಖ್ಯಸ್ಥರಿಗೆ ಎರಡು ಸೆಟ್ ಪ್ರಿಂಟ್ ಅರ್ಜಿ ಜತೆಗೆ ಎರಡು ಸ್ಟಾಂಪ್ ಹಾಗೂ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಮೂಲ ಅಂಕಪಟ್ಟಿಗಳು ಮತ್ತು ಅವುಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಿ, ಪರಿಶೀಲನೆಯ ನಂತರ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು, ಮುಕ್ತ ವಿವಿ ಪ್ರವೇಶಾತಿ ವಿಭಾಗದ ನಿರ್ದೇಶಕರು ನೀಡುವ ಬ್ಯಾಂಕ್ ಚಲನ್ ಮೂಲಕ ಶುಲ್ಕವನ್ನು ಪಾವತಿಸಿ ಅದರ ಒಂದು ಪ್ರತಿಯನ್ನು ಅದೇ ಪ್ರಾದೇಶಿಕ ಕಚೇರಿಯಲ್ಲಿ ಅಥವಾ ಮುಕ್ತ ವಿವಿ ಪ್ರವೇಶಾತಿ ವಿಭಾಗದಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು. ವಿವಿ ಕುಲಸಚಿವ ಪ್ರೊ.ರಮೇಶ್, ಡೀನ್ ಪ್ರೊ.ಜಗದೀಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಪ್ರಾದೇಶಿಕ ಕಚೇರಿಯಲ್ಲೇ ಸಿದ್ಧಪಾಠ ಲಭ್ಯ: ಪ್ರವೇಶಾತಿ ಪಡೆದ ದಿನವೇ ಗುರುತಿನ ಪತ್ರ ಮತ್ತು ಸಿದ್ಧಪಾಠಗಳನ್ನು ಮುಕ್ತ ವಿವಿಯ ಸಿದ್ಧಪಾಠ ವಿಭಾಗದ ಅಧಿಕಾರಿಗಳು ಅಥವಾ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಿಂದ ಪಡೆಯಬಹುದಾಗಿದ್ದು, ಪ್ರವೇಶಾತಿ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಮೈಸೂರಿಗೆ ಬರುವ ಅಗತ್ಯವಿಲ್ಲ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು. 2014-15ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಶುಲ್ಕವನ್ನೇ ಈಗಲೂ ಮುಂದುವರಿಸಿದ್ದು, ಎಸ್ಸಿ, ಎಸ್ಟಿ ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ಕುರಿತ ಡಿಪ್ಲೋಮ ಆರಂಭಿಸಲಾಗುವುದು. ಬಿಎಸ್‌ಡಬ್ಲೂ, ಎಂಎಸ್‌ಡಬ್ಲೂ, ಬಿಬಿಎ ಕೋರ್ಸ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಕ್ಕ ನಂತರ ಈ ಕೋರ್ಸ್‌ಗಳನ್ನು ಆರಂಭಿಸುವುದಾಗಿ ಹೇಳಿದರು.