Advertisement

ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ

07:43 PM Sep 11, 2019 | mahesh |

ಬೆಳ್ತಂಗಡಿ: ಕೃಷಿ ಉತ್ಪನ್ನ ಮಾರುಕಟ್ಟೆಯ ಷರತ್ತು ಉಲ್ಲಂಘಿಸಿ ಪಂ.ನವರು ಕಟ್ಟಡವನ್ನು ವಾಣಿಜ್ಯ ವ್ಯವಹಾರಕ್ಕೆ ಬಳ ಸಿದ್ದು, ಕೃಷಿಕರಿಗೆ ಅನ್ಯಾಯ ಎಸಗಲಾಗಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ವೇಣೂರು ಪಂ. ವಿರುದ್ಧ ಲೋಕಾಯುಕ್ತ ಸಭೆಯಲ್ಲಿ ದೂರು ಕೇಳಿಬಂತು.

Advertisement

ತಾ| ಮಿನಿ ವಿಧಾನಸೌಧದಲ್ಲಿ ಬುಧ ವಾರ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಅಧ್ಯಕ್ಷತೆ ಯಲ್ಲಿ ನಡೆದ ಕರ್ನಾಟಕ ಲೋಕಾಯುಕ್ತ ಇಲಾಖೆ, ತಾ| ಮಟ್ಟದ ಅಧಿಕಾರಿಗಳ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಹಲವಾರು ದೂರುಗಳು ದಾಖಲಾದವು.

ವೇಣೂರು ಗ್ರಾಮೀಣ ಸಂತೆ ಮಾರು ಕಟ್ಟೆಗೆಂದು ಕೃಷಿ ಉತ್ಪನ್ನ ಮಾರಾಟ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕೃಷಿಕರಿಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಿ ಷರತ್ತುಬದ್ಧ ಕರಾರಿನೊಂದಿಗೆ ವೇಣೂರು ಗ್ರಾ.ಪಂ.ಗೆ ಹಸ್ತಾ¤ಂತರಿಸಿತ್ತು. ಆದರೆ ಷರತ್ತು ಉಲ್ಲಂಘಿಸಿದ್ದಾರೆ ಎಂದು ದಾಖಲೆ ಸಹಿತ ಅನೂಪ್‌ ಜೆ. ಪಾಯಸ್‌ ಲೋಕಾಯುಕ್ತರಿಗೆ ದೂರು ನೀಡಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಲಾಗುವುದು ಎಂದು ಲೋಕಾ ಉಪ ಅಧೀಕ್ಷಕ ವಿಜಯಪ್ರಸಾದ್‌ ಹೇಳಿದರು.

ಭಾಗ್ಯಲಕ್ಷ್ಮೀ ಹಣ ದುರುಪಯೋಗ ಆರೋಪ
ಕೊಲ್ಲಿ ಸರಕಾರಿ ಅಂಗನವಾಡಿ ಕೇಂದ್ರ ದಲ್ಲಿ ಶಿಕ್ಷಕಿ ಭಾಗ್ಯಲಕ್ಷ್ಮೀ ಯೋಜನೆ ಹಣ ಪಡೆಯುತ್ತಿದ್ದಾರೆ. ಮಕ್ಕಳ ಹಾಜರಾತಿ ಇಲ್ಲ ದಿದ್ದರೂ ಸಹಿ ಹಾಕಿಸುತ್ತಿದ್ದು, ಫಲಾನು ಭವಿಗಳ ನಕಲಿ ಸಹಿ ಬಳಸಿ ಆಹಾರ ಬಳಸ ಲಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಸುರೇಂದ್ರ ಬಂಗಾಡಿ ಲೋಕಾಯುಕ್ತರಿಗೆ ದೂರು ನೀಡಿದರು.

ಸುಧೆಮುಗೇರು ಹೊಳೆ ಬದಿ 2018ರಲ್ಲಿ ತಡೆಗೋಡೆ ಕುಸಿತ ವಾಗಿದ್ದು, ನಿರ್ಮಿಸಿಲ್ಲ ಎಂದು ತೋಮಸ್‌ ಅಲೆಕ್ಸಾಂಡರ್‌ ಕೊಯ್ಯೂರು ಅವರು ದೂರು ನೀಡಿದರು.

Advertisement

ಫಲಾನುಭವಿಗಳಿಗೆ ತಪ್ಪು ಮಾಹಿತಿ
ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಉ. ಖಾ. ಯೋಜನೆಯಲ್ಲಿ ಫಲಾನುಭವಿಗಳಿಗೆ ತಪ್ಪು ಮಾಹಿತಿ ನೀಡಿ ತಲಾ 1 ಸಾವಿರ ರೂ. ಪಡೆದಿದ್ದು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ದೂರು ನೀಡಿದ ಬಳಿಕ ಅವರ ಆದೇಶದ ಮೇರೆಗೆ ತತ್‌ಕ್ಷಣ ಹಣ ಮರುಪಾವತಿಗೆ ಸೂಚಿಸಲಾಗಿದೆ. ಅದರಂತೆ ಕೆಲವರು ಮರು ಪಾವತಿ ಮಾಡುತ್ತಿದ್ದಾರೆ. ಇಲ್ಲಿನ ಅಕ್ರಮದ ತನಿಖೆ ನಡೆಸಬೇಕೆಂದು ಅನೂಪ್‌ ಜೆ. ಪಾಯಸ್‌ ದೂರು ನೀಡಿದರು.

ಮಾಚಾರು ಶಶಿಧರ್‌ ನಾಯ್ಕ ಮತ್ತು ನವೀನ ಎಂಬವರು ರಾಜೀವ್‌ ಗಾಂಧಿ ವಸತಿ ಯೋಜನೆಯಲ್ಲಿ ಎರಡು ಮನೆ ಪಡೆದು ಬಾಡಿಗೆ ನೀಡುತ್ತಿದ್ದು, ತನಿಖೆ ನಡೆಸಬೇಕು ಎಂದು ದಿನೇಶ್‌ ನಾಯ್ಕ ದೂರು ನೀಡಿದರು.
ತನ್ನ ಸ್ವಂತ ಹಕ್ಕಿನ ಜಾಗದಲ್ಲಿ 4 ಬಾರಿ ಮುಟೇಷನ್‌ ಮಾಡಲಾಗಿದ್ದು, ಈ ಕುರಿತು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಒಂದು ತಿಂಗಳಾದರು ಕ್ರಮ ಕೈಗೊಂಡಿಲ್ಲ ಎಂದು ಹರಿಶ್ಚಂದ್ರ ತಾಮನ್ಕರ್‌ ದೂರು ನೀಡಿದರು.

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡುವಾಗ ಅದರಲ್ಲಿ ರಸಗೊಬ್ಬರ ತಯಾರಿಸಬೇಕು ಎಂಬ ಷರತ್ತು ನೀಡಿದ್ದು, ಆದರೆ ಇದುವರೆಗೆ ರಸಗೊಬ್ಬರ ತಯಾರಿಸಿಲ್ಲ. ಆದರೂ ಪಂ. ಗುತ್ತಿಗೆದಾರನಿಗೆ ಪಾವತಿ ನೀಡುತ್ತಿದ್ದು, ಪಂ. ಅಧಿಕಾರ ದುರುಪಯೋಗದ ಕುರಿತು ತನಿಖೆ ನಡೆಸಬೇಕು ಎಂದು ಸುಬ್ರಹ್ಮಣ್ಯ ಪ್ರಸಾದ್‌ ದೂರು ನೀಡಿದರು.

ಬೆಳ್ತಂಗಡಿಯ ವಿ.ಆರ್‌. ನಾಯಕ್‌ ಅವರು, ನಾಲ್ಕು ಎಕ್ರೆ ನಕ್ಷೆಯಲ್ಲಿ ಸಂಪರ್ಕ ರಸ್ತೆ ಇಲ್ಲದಂತೆ 4 ಕಡೆ ನಕ್ಷೆ ಬದಲಾಯಿಸಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

2004ರಲ್ಲಿ ಬಾರ್ಯ ಗ್ರಾಮದ ಮುದರ ಪೂಜಾರಿ ಅವರಿಗೆ 47/1ಪಿಪಿ1ನಲ್ಲಿ 1.40 ಎಕ್ರೆ ಸ್ಥಳಕ್ಕೆ ಹಕ್ಕುಪತ್ರ ಸಿಕ್ಕಿದ್ದು, ಅನಂತರ ತಾಲೂಕು ಕಚೇರಿಯಲ್ಲಿ ಇದರ ಕಡತವೇ ಸಿಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಯಶೋಧರ ಪೂಜಾರಿ ದೂರು ನೀಡಿದರು. ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಲೋಕಾಯುಕ್ತ ಉಪ ಅಧೀಕ್ಷಕ ವಿಜಯಪ್ರಸಾದ್‌, ಡಿವೈಎಸ್‌ಪಿ ಕಲಾವತಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಭಾರತಿ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ಪಹಣಿ, ಆಧಾರ್‌ಗಾಗಿ ಅಲೆದಾಟ ತಪ್ಪಿಸಿ
ಖಾತೆ ಬದಲಾವಣೆ, ಆಧಾರ್‌, ಪಹಣಿ ಪತ್ರ, ಇನ್ನಿತರ ಇಲಾಖಾ ಕಾರ್ಯಗಳಿಗೆ ಶಿಬಾಜೆ ಗ್ರಾಮದಿಂದ ತಾ| ಕೇಂದ್ರಕ್ಕೆ ಸುಮಾರು 50 ಕಿ.ಮೀ. ಬರಬೇಕಿದೆ. ಇದು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಇದರ ಬದಲು ಈ ಹಿಂದೆ ಇದ್ದ ಬಾಪೂಜಿ ಸೇವಾ ಕೇಂದ್ರವನ್ನು ಪಂ. ಮಟ್ಟದಲ್ಲಿ ಪ್ರಾರಂಭಿಸಬೇಕು. ಶಾಲೆಗೆ ಮಕ್ಕಳ ದಾಖಲಾತಿ, ಪಡಿತರ ಚೀಟಿ, ಆಧಾರ್‌ ತಿದ್ದುಪಡಿಗೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಜಯರಾಮ್‌ ಗೌಡ ದೂರು ನೀಡಿದರು. ಇದಕ್ಕೆ ತಹಶೀಲ್ದಾರ್‌ ಸ್ಪಂದಿಸಿ, ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಈ ರೀತಿ ಆಗುತ್ತಿದೆ. ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದರು.
ಸಭೆಯಲ್ಲಿ ಒಟ್ಟು 34 ದೂರುಗಳನ್ನು ಸ್ವೀಕರಿಸಿ, 13 ಪ್ರಕರಣಗಳ ಇತ್ಯರ್ಥಕ್ಕೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next