Advertisement

ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕಾರ

05:31 PM Aug 07, 2019 | Suhan S |

ಮಾಲೂರು: ತಾಲೂಕು ಕಚೇರಿಯಲ್ಲಿ ರೈತರ ಪ್ರತಿ ಕೆಲಸಕ್ಕೂ ಅಧಿಕಾರಿಗಳು ಲಂಚ ನಿಗದಿ ಪಡಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.

Advertisement

ರೈತ ಸಂಘದ ತಾಲೂಕು ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್‌ ನೇತೃತ್ವದಲ್ಲಿ ಕಾರ್ಯಕರ್ತರು, ತಾಲೂಕು ಕಚೇರಿಗೆ ಭೂ ದಾಖಲೆಗಳು ಮತ್ತು ಇತರು ಕೆಲಸಗಳಿಗೆ ಬರುವ ರೈತರಿಂದ ನೇರವಾಗಿ ಅಧಿಕಾರಿ ಗಳು ಲಂಚ ಕೇಳುತ್ತಾರೆ. ಲಂಚ ನೀಡದ ರೈತರ ಕೆಲಸಗಳನ್ನು ವಿಳಂಬ ಮಾಡುವ ಜೊತೆಗೆ ಅನಗತ್ಯವಾಗಿ ಕಿರುಕುಳ ನೀಡು ತ್ತಿರುವುದಾಗಿ ದೂರಿದರು. ಪ್ರತಿ ಕೆಲ ಸಕ್ಕೂ ಲಂಚದ ಮೊತ್ತ ನಿಗದಿಪಡಿಸಿರುವ ಅಧಿಕಾರಿಗಳು, ಲಂಚ ನೀಡದ ಹೊರತು ಕೆಲಸ ಮಾಡುತ್ತಿಲ್ಲ. ಮಧ್ಯವರ್ತಿಗಳನ್ನು ನೇಮಿಸಿಕೊಂಡಿ ರುವ ಅಧಿಕಾರಿಗಳು, ಆ ಮೂಲಕ ಲಂಚ ಪಡೆಯುತ್ತಿರುವು ದಾಗಿ ಅರೋಪಿಸಿದ್ದಾರೆ. ಈ ಬಗ್ಗೆ ತಹ ಶೀಲ್ದಾರ್‌ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರಮೇಶ್‌ ಅರೋಪಿಸಿದರು. ತಾಲೂಕು ಕಚೇರಿ ಯಲ್ಲಿ ವಿಲೇ ವಾರಿಯಾಗದ ಅರ್ಜಿಗ ಳನ್ನು ಈ ಕೂಡಲೇ ವಿಲೆ ಮಾಡುವ ಜೊತೆಗೆ ತಾಲೂಕಿನ ಮಿರಪನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿರುವ ರಾಜ ಕಾಲುವೆ ತೆರವುಗೊಳಿಸುವಂತೆ ಆಗ್ರಹಿಸಿ ದರು. ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿ ಕಾರಿಗಳು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಪ್ರತಿಭಟನೆಯಲ್ಲಿ ಬೆಡಶೆಟ್ಟಿ ಹಳ್ಳಿ ರಮೇಶ್‌,ಕೆ.ಹರೀಶ್‌, ಸಿ.ನಾಗ ರಾಜು, ಗೋವಿಂದಪ್ಪ, ಗೋಪಾಲಪ್ಪ, ಅಶ್ವತ್ಥ್, ಪ್ರಕಾಶ್‌ರೆಡ್ಡಿ, ವೆಂಕಟೇಶ್‌, ಅನಂದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next