Advertisement

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

01:09 PM Aug 11, 2019 | Suhan S |

ಕನಕಗಿರಿ: ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಲ್ಲವನ್ನು ಸಂತೋಷದಿಂದ ಎದುರಿಸಬೇಕು ಎಂದು ತಹಶೀಲ್ದಾರ್‌ ರವಿ ಅಂಗಡಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ನಡೆದ ಕನಕಗಿರಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣದ ಜೊತೆಗೆ ದೈಹಿಕ ಸದೃಢತೆಗೆ ಕ್ರೀಡೆಯೂ ಅತ್ಯವಶ್ಯಕವಾಗಿದೆ. ಕೇವಲ ಓದಿನಿಂದ ಎಲ್ಲವನ್ನು ಸಾಸಲು ಸಾಧ್ಯವಿಲ್ಲ. ಅದರ ಜೊತೆಗೆ ದೈಹಿಕ ಸಾಮರ್ಥ್ಯ, ಹೊರ ಪ್ರಪಂಚದ ಜ್ಞಾನವಿದ್ದಾಗ ಪರಿಪಕ್ವವಾದ ವಿದ್ಯಾರ್ಥಿಯಾಗಲು ಸಾಧ್ಯ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಕ್ರೀಡೆ ಅತ್ಯಗತ್ಯ. ಗ್ರಾಮೀಣ ಮಟ್ಟದ ಕ್ರೀಡೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೀಡಾ ಪಟುಗಳು ಬೆಳೆಯಲು ಈ ಕ್ರೀಡಾಕೂಟ ಸಹಕಾರಿ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಪಂ ಸದಸ್ಯೆ  ಲಕ್ಷ್ಮಮ ನೀರಲೂಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕೇಸರಹಟ್ಟಿ, ಹೀರೆಖೇಡಾ, ಗೌರಿಪುರ, ಮುಸಲಾಪುರ, ಹುಲಿಹೈದರ್‌, ಕಲಿಕೇರಿ ಸೇರಿದಂತೆ ವಲಯ ವ್ಯಾಪ್ತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಜಿಪಂ ಸದಸ್ಯೆ ಭಾಗ್ಯವತಿ, ಪ್ರಾಂಶುಪಾಲ ಬಸವರಾಜ ಬಡಿಗೇರ, ಉಪ ತಹಶೀಲ್ದಾರ್‌ ವಿಶ್ವೇಶ್ವರಯ್ಯಸ್ವಾಮಿ, ಸಿಆರ್‌ಪಿ ಸಂಗಮೇಶ ಹಿರೇಮಠ, ಪ್ರಮುಖರಾದ ಸಣ್ಣ ಕನಕಪ್ಪ, ದೈಹಿಕ ಶಿಕ್ಷಕರು, ವಿವಿಧ ಶಾಲೆ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next