Advertisement

ಆ್ಯಕ್ಸೆಂಚರ್ ಆದಾಯ ಏರಿಕೆ , ಸಿಬ್ಬಂದಿಗಳಿಗೆ ಕೋವಿಡ್ ಸಂಕಷ್ಟದಲ್ಲೂ ಬೋನಸ್..!

01:53 PM Mar 19, 2021 | |

ನವ ದೆಹಲಿ : ಜಾಗತಿಕ ತಂತ್ರಜ್ಞಾನದ ದೈತ್ಯ ಆ್ಯಕ್ಸೆಂಚರ್ ನ ಎಫ್‌ ವೈ(ಫೈನಾನ್ಶಿಯಲ್ ಈಯರ್)21 ರಲ್ಲಿ ವಾರ್ಷಿಕ ಆದಾಯದ ಬೆಳವಣಿಗೆ ಲೋಕಲ್ ಕರೆನ್ಸಿಯಲ್ಲಿ 6.5  ರಿಂದ 8.5% ರಷ್ಟಕ್ಕೆ ಹೆಚ್ಚಳವಾಗಿದೆ.

Advertisement

ಸೆಪ್ಟೆಂಬರ್ ಆಗಸ್ಟ್ ಆರ್ಥಿಕ ವರ್ಷವನ್ನು ಅನುಸರಿಸುವ ಆ್ಯಕ್ಸೆಂಚರ್, ಎಫ್‌ ವೈ 21 ರ ಆಪರೇಟಿಂಗ್ ಮಾರ್ಜಿನ್  14.8 ರಿಂದ 15.0% ಕ್ಕೆ 15.0 ರಿಂದ 15.1% ಕ್ಕೆ ಏರಿಸಿದೆ, ಇದು ಎಫ್‌ ವೈ20 ರಲ್ಲಿ 30 ರಿಂದ40 ಬೇಸಿಸ್ ಪಾಯಿಂಟ್‌ ಗಳ ವಿಸ್ತರಣೆಗೊಂಡಿದೆ.

ಓದಿ : ಬಿಂಕದಕಟ್ಟಿ ಝೂಗೆ ಹೊಸ ಅತಿಥಿಗಳ ಆಗಮನ: ಕಿರು ಮೃಗಾಲಯದಲ್ಲಿ ಸಿಂಹಗಳ ಘರ್ಜನೆ

ಫೆಬ್ರವರಿಯಯಲ್ಲಿ ಕೊನೆಗೊಂಡ ಎರಡನೇ ತ್ರೈಮಾಸಿಕದ ಆದಾಯವು  12.09 ಬಿಲಿಯನ್ ಆಗಿದ್ದು, ಯುಎಸ್ ಡಾಲರ್ ನಲ್ಲಿ ಶೇ. 8  ಮತ್ತು ಲೋಕಲ್ ಕರೆನ್ಸಿಯಲ್ಲಿ ಶೇ. 5 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ಆದಾಯವು ವರ್ಷದಿಂದ ವರ್ಷಕ್ಕೆ ಶೇ. 11 ರಷ್ಟು ಏರಿಕೆಯಾಗಿ  1.65 ಶತಕೋಟಿಗೆ ತಲುಪಿದ್ದರೆ, ಆಪರೇಟಿಂಗ್ ಮಾರ್ಜಿನ್ ಶೇ.  13.7 ರಷ್ಟಿದ್ದು, ಇದು 30 ಬೇಸಿಸ್ ಪಾಯಿಂಟ್‌ ಗಳ ವಿಸ್ತರಣೆಗೊಂಡಿದೆ.

Advertisement

ಇನ್ನು, ಮ್ಯಾನೆಜಿಂಗ್ ಡೈರೆಕ್ಟರ್ ಲೆವೆಲ್ ಗಿಂತ ಕೆಳಗಿರುವ ಎಲ್ಲ ಸಿಬ್ಬಂದಿ ಕಂಪನಿಯು ಒಂದು ವಾರದ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಘೋಷಿಸಿದೆ.

“ಈ ಕೋವಿಡ್ 19ನ ಸವಾಲಿನ ವರ್ಷದಲ್ಲಿ ಎಲ್ಲಾ ಆ್ಯಕ್ಸೆಂಚರ್ ಸಿಬ್ಬಂದಿಗಳ ಅಸಾಧಾರಣ ಸೇವೆ ಮತ್ತು ನಿಷ್ಠೆಗೆ  ಈ ಬೋನಸ್ ನ ಕೊಡುಗೆಯನ್ನು ಸಮರ್ಪಿಸುತ್ತಿದೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಓದಿ : ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ: ಎಂಎಲ್‌ಸಿ ವಿಶ್ವನಾಥ್ ಪ್ರಶ್ನೆ

Advertisement

Udayavani is now on Telegram. Click here to join our channel and stay updated with the latest news.

Next