ಇಲ್ಲಿನ ಪಂಚಾಕ್ಷರಿ ನಗರದಲ್ಲಿರುವ ಮನೆ, ಅಳಿಯನ ಮನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಉಪ ತಹಶೀಲ್ದಾರ್ ಚೇಂಬರ್ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಣ್ಣಿಗೇರಿ ಅವರಿಗೆ ಸೇರಿದೆ ಎನ್ನಲಾದ ಟಾಂಗಾಕೂಟದಲ್ಲಿರುವ ಖಾಸಗಿ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಕುರಿತು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಗದಗ ಭ್ರಷ್ಟಾಚಾರ ನಿಗ್ರಹ ದಳ ಡಿಎಸ್ಪಿ ಮಲ್ಲಾಪುರ ಅವರ ನೇತೃತ್ವದ ಎರಡು ತಂಡಗಳಲ್ಲಿ ಸುಮಾರು ೧೫ಕ್ಕೂ ಹೆಚ್ಚು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Advertisement