Advertisement

ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯ ಮನೆ ಮೇಲೆ ಎಸಿಬಿ ದಾಳಿ

12:56 PM Dec 31, 2020 | Team Udayavani |

ಶಿವಮೊಗ್ಗ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಿ.ಜಿ.ಸುರೇಶ್ ಮನೆ ಮೇಲೆ ಎಸಿಬಿ ದಾಳಿಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

ಜಿ.ಜಿ.ಸುರೇಶ್ ಅವರಿಗೆ ಸಂಬಂಧಿಸಿದ ಮಲ್ಲೇಶ್ವರನಗರದ ಅನ್ನಪೂರ್ಣೇಶ್ವರಿ ನಿಲಯ ಹಾಗೂ ಗೋಪಾಳದ ಮೇಲೆ ದಾಳಿ ಮಾಡಲಾಗಿದೆ.  ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ತೋಟದ ಮನೆ ಮೇಲೆ ದಾಳಿ ನಡೆಸಲಾಗಿದೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಗೂ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಮುಂದಿನ ಎರಡೂವರೆ ವರ್ಷ ನಾನೇ ಸಿಎಂ:’ಸಂಕ್ರಾಂತಿ ನಂತರದ ಬದಲಾವಣೆ’ ಹೇಳಿಕೆಗೆ ಬಿಎಸ್ ವೈ ಉತ್ತರ

ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಪಡೆದ ಎಸಿಬಿ ತಂಡ ದಾಳಿ ನಡೆಸಿದ್ದು, ಶಿವಮೊಗ್ಗ ಎಸಿಬಿ ಡಿಎಸ್ ಪಿ ಜೆ.ಲೋಕೇಶ್ ಹಾಗೂ ದಾವಣಗೆರೆ ಡಿಎಸ್ ಪಿ ಹೆಚ್.ಎಸ್.ಪರಮೇಶ್ವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next