ಶಿವಮೊಗ್ಗ: ಗದಗ ಜಿಲ್ಲೆಯ ಜಂಟಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪರ ಶಿವಮೊಗ್ಗ ಮನೆಯಲ್ಲಿ ಬುಧವಾರ ನಡೆದ ಎಸಿಬಿ ದಾಳಿಯಲ್ಲಿ ಭಾರಿ ಪ್ರಮಾಣದ ಸಂಪತ್ತು ಪತ್ತೆಯಾಗುತ್ತಲೇ ಇದ್ದು, ಮನೆಯಲ್ಲೇ ನಾಟ ಸಂಗ್ರಹ ಮಾಡಿರುವ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳು ಆಗಮಿಸಿ ತಪಾಸಣೆ ಆರಂಭಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ ಚಾಲುಕ್ಯ ನಗರದ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಎಂಟು ಕೆ.ಜಿ.ಬಂಗಾರದ ಗಟ್ಟಿ(ಚಿನ್ನದ ಬಿಸ್ಕೆಟ್), ಒಂದೂವರೆ ಕೆಜಿ ಬಂಗಾರದ ಆಭರಣಗಳು, ಮೂರು ಕೆಜಿಗೂ ಹೆಚ್ಚು ಬೆಳ್ಳಿ ವಸ್ತುಗಳು ಮತ್ತು 15 ಲಕ್ಷ ರೂಪಾಯಿ ಹಣ ಪತ್ತೆ ಹಚ್ಚಿದ್ದಾರೆ.
ಅಕ್ರಮ ನಾಟವೋ ಇಲ್ಲವೇ ಪರವಾನಗಿ ಸಹಿತ ಖರೀದಿ ಮಾಡಿದ್ದಾರೆಯೇ ಎಂದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಇದಲ್ಲದೆ ವಿವಿಧ ಆಸ್ತಿಗಳ ದಾಖಲೆಯೂ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಎಸಿಬಿ ದಾಳಿ: ಹೆಸ್ಕಾಂನ ಗ್ರೂಪ್ ಸಿ ನೌಕರನ ಮನೆಯಲ್ಲಿ ಡಾಲರ್, ಪ್ಲಾಟಿನಂ!