Advertisement

ಜಮೀರ್‌ ವಿಚಾರಣೆಗೆ ಎಸಿಬಿ ಸಿದ್ಧತೆ

09:11 PM Jul 07, 2022 | Team Udayavani |

ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿಗೊಳಗಾದ ಶಾಸಕ ಜಮೀರ್‌ ಅಹಮದ್‌ ಅವರನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ.

Advertisement

ಜಮೀರ್‌ ಅಕ್ರಮ ಆಸ್ತಿ ಹೊಂದಿರುವ ಬಗೆಗಿನ ಮಾಹಿತಿ ಆಧರಿಸಿ ಎಸಿಬಿ ಅಧಿಕಾರಿಗಳು ಇತ್ತೀಚೆಗೆ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಅಕ್ರಮ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಎಸಿಬಿ ಜಪ್ತಿ ಮಾಡಿದೆ. ಸದ್ಯದಲ್ಲೇ ಜಮೀರ್‌ಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಿ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕಲು ಎಸಿಬಿ ಮುಂದಾಗಿದೆ.

ಅಕ್ರಮ ಪತ್ತೆ:

ಅಕ್ರಮವಾಗಿ ಕೋಟ್ಯಂತರ ರೂ. ವರ್ಗಾವಣೆ ಮಾಡಿರುವ ಆರೋಪದ ಮೇಲೆ 2021 ಆ.8ರಂದು ಇ.ಡಿ. ಅಧಿಕಾರಿಗಳು ಜಮೀರ್‌ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಜಪ್ತಿ ಮಾಡಿದ್ದ ಆಸ್ತಿಯನ್ನು ಪರಿಶೀಲಿಸಿದಾಗ 87.44 ಕೋಟಿ ರೂ. (ಶೇ.2031) ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಬಗ್ಗೆ ಇ.ಡಿ. ಅಧಿಕಾರಿಗಳು ಎಸಿಬಿಗೆ  ಮಾಹಿತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next