Advertisement

ಬೆಳ್ತಂಗಡಿ:ಎಸಿಬಿ ದಾಳಿ; ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಾಲಾಡಿ ಪಿಡಿಒ

02:44 PM Dec 13, 2021 | Team Udayavani |

ಬೆಳ್ತಂಗಡಿ: ಜಾಗದ 9/11 ವಿಚಾರವಾಗಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಮಾಲಾಡಿ ಪಂ.ಅಭಿವೃದ್ಧಿ ಅಧಿಕಾರಿ ರವಿ ಅವರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Advertisement

ಗ್ರಾಮಸ್ಥರೊಬ್ಬರಿಂದ ಜಾಗದ 9/11 ಒದಗಿಸಲು 15,000 ರೂ. ಲಂಚ ಪಡೆಯುವ ವೇಳೆ ದ.ಕ. ಬ್ರಷ್ಟಾಚಾರ ನಿಗ್ರಹದಳದ ತಂಡ ಸೋಮವಾರ ದಾಳಿ ನಡೆಸಿದೆ.

ಇದನ್ನೂ ಓದಿ: ವಿಟ್ಲ ಪಟ್ಟಣ ಪಂಚಾಯತ್ : ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ

ಭ್ರಷ್ಟಾಚಾರ ನಿಗ್ರಹದಳದ ಇನ್ಸ್ ಪೆಕ್ಟರ್ ಗುರುರಾಜ್ ಹಾಗೂ ಶ್ಯಾಮ್ ಸುಂದರ್ ನೇತೃತ್ವದಲ್ಲಿ ಡಿವೈಎಸ್ ಪಿ ಕೆ.ಸಿ.ಪ್ರಕಾಶ್ ದಾಳಿ ನಡೆಸಿದ್ದಾರೆ.

ಸಿಬಂದಿಗಳಾದ ರಾಧಾಕೃಷ್ಣ, ಹರಿಪ್ರಸಾದ್, ಆದರ್ಶ್, ಗಂಗಾಧರ್, ಮೋಹನ್, ವೈಶಾಲಿ ಸಹಕರಿಸಿದ್ದರು. ಪಿಡಿಒ ಅವರನ್ನು ವಶಕ್ಕೆ ಪಡೆದು ಲಂಚದ ವಿಚಾರವಾಗಿ ವಿಚಾರಣೆ ಮುಂದುವರೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next