Advertisement

1.46 ಲಕ್ಷ ಲಂಚದ ಹಣ ಸಮೇತ ಎಸಿಬಿ ಬಲೆಗೆ ಬಿದ್ದ ಕೈಗಾರಿಕಾ ಜೆಡಿ ಸಿದ್ದಣ್ಣ

10:12 PM Jan 12, 2021 | Team Udayavani |

ವಿಜಯಪುರ: ತಮ್ಮ ಇಲಾಖೆಯ ಯೋಜನೆ ಸಬ್ಸೀಡಿ ಹಣ ನೀಡಲು ಫಲಾನುಭವಿಯಿಂದ ಲಕ್ಷಾಂತರ ರೂ. ಲಂಚ ಪಡೆದ ವಿಜಯಪುರ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದಣ್ಣ ಹಣದ ಸಮೇತ ಎಸಿಬಿ ಬಲೆಗೆ ಬಿದ್ದಿದ್ದಾರೆ‌.

Advertisement

ನಗರದ ಕೈಗಾರಿಕಾ ಕೇಂದ್ರದ ಕೆಐಎಡಿಬಿ ವ್ಯಾಪ್ತಿಯಲ್ಲಿ ಭಾಗ್ಯಶ್ರೀ ವಿಜಯಕುಮಾರ ಮನ್ನೂರು ಎಂಬವರು ಶುದ್ಧ ನೀರಿನ ಘಟಕ ಇರುವ ಮೇ.ನಂದಿ ಅಗ್ರೋ ಫುಡ್ ಇಂಡಸ್ಟ್ರೀಸ್ ಹೆಸರಿನ ಘಟಕವನ್ನು ಸಂಗನಗೌಡ ಪಾಟೀಲ ಎಂಬರಿಂದ ಖರೀದಿಸಿದ್ದರು.

ಸದರಿ ಘಟಕ ಖರೀದಿಗಾಗಿ ಫಲಾನುಭವಿ ಭಾಗ್ಯಶ್ರೀ ಅವರಿಗೆ ಸರ್ಕಾರ 20.87 ಲಕ್ಷ ರೂ. ಸಬ್ಸೀಡಿ ಮಂಜೂರಾಗಿತ್ತು. ಆದರೆ ಈ ಸಬ್ಸಿಡಿ ಹಣ ಬಿಡುಗಡೆಗೆ ಸಿದ್ದಣ್ಣ ಲಂಚಕ್ಕೆ ಬೇಡಿಕೆ ಇಟ್ಟರೂ ಫಲಾನುಭವಿ ಲಂಚ ನೀಡಲು ನಿರಾಕರಿಸಿದ್ದರು.

ಲಂಚದ ನೀಡದ ಕಾರಣಕ್ಕೆ ಭಾಗ್ಯಶ್ರೀ ಅವರಿಗೆ ಸಬ್ಸೀಡಿ ಹಣ ಬಿಡುಗಡೆ ಮಾಡದಂತೆ ಜಂಟಿ ನಿರ್ದೇಶಕ ಸಿದ್ದಣ್ಣ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಅಲ್ಲದೇ ಸಬ್ಸೀಡಿ ಹಣ ಬಿಡುಗಡೆಗೆ 1.46 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ  ಫಲಾನುಭವಿ ಭಾಗ್ಯಶ್ರೀ ಅವರ ಪತಿ ವಿಜಯಕುಮಾರ ಎಸಿಬಿ ಮೊರೆ ಹೋಗಿದ್ದರು.

Advertisement

ಮಂಗಳವಾರ ಸಂಜೆ 7.40 ರ ಸುಮಾರಿಗೆ ಫಲಾನುಭವಿ ಭಾಗ್ಯಶ್ರೀ ಅವರಿಂದ 1.46 ಲಕ್ಷ ರೂ. ಲಂಚ ಸ್ವೀಕರಿಸಿದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚದ ಹಣದ ಸಮೇತ ಆರೋಪಿ ಅಧಿಕಾರಿ ಸಿದ್ದಣ್ಣ ಅವರನ್ನು ಬಂಧಿಸಿದ್ದಾರೆ‌.

ಎಸಿಬಿ ವಿಜಯಪುರ ಡಿಎಸ್ಪಿ ಬಿ.ಎಸ್.ಗಂಗಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಪಿಐ ಹರಿಶ್ಚಂದ್ರ, ಪರಮೇಶ್ವರ ಕವಟಗಿ ಅವರ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.

ಇದನ್ನೂ ಓದಿ : ಸಿ.ಎಂ. ನನಗೆ ಕರೆ ಮಾಡಿಲ್ಲ, ನನ್ನ ಕರೆನ್ಸಿ ಖಾಲಿಯಾಗಿದೆ-ಯತ್ನಾಳ

Advertisement

Udayavani is now on Telegram. Click here to join our channel and stay updated with the latest news.

Next