Advertisement

ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್

09:30 AM Sep 21, 2019 | Sriram |

ಗದಗ: ನಿವೇಶನದ ನಕ್ಷೆ ತಯಾರಿಸಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ಸಿಟಿ ಸರ್ವೇಯರ್ ಹಾಗೂ ದಿನಗೂಲಿ ನೌಕರನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಭೂಮಾಪನ ಇಲಾಖೆ ಕಚೇರಿಯಲ್ಲಿ ಸಿಟಿ ಸರ್ವೇಯರ್ ರಮೇಶ್ ಹಾಗೂ ದಿನಗೂಲಿ ನೌಕರ ಮೋಹನ್ ಅವರು ಅರ್ಜಿದಾರರಿಂದ 1೦೦೦ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಚಂದ್ರಶೇಖರ ಎಂಬುವರರು ತಮ್ಮ ಚಿಕ್ಕಪ್ಪನ ಹೆಸರಲ್ಲಿರುವ ನಿವೇಶನದ ನಕ್ಷೆ ಮಾಡಿಕೊಂಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. 2 3 ತಿಂಗಳಿಂದ ನಿತ್ಯ ಅಲೆದಾಡಿಸುತ್ತಿದ್ದ ಭೂ ಮಾಪನ ಅಧಿಕಾರಿಗಳು 1 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಖಚಿತ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಗದಗ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ವಾಸುದೇವರಾಮು ನೇತೃತ್ವದಲ್ಲಿ ದಾಳಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next