ವಿಶ್ವಸಂಸ್ಥೆ: ಕೋವಿಡ್-19 ಪಿಡುಗಿನಿಂದಾಗಿ ಶಾಲೆ, ಕಾಲೇಜುಗಳು ಮುಚ್ಚಿದ್ದರಿಂದ ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಹೇಳಿದೆ. ಕೋವಿಡ್ ಸುರಕ್ಷಾ ಲಾಕ್‌ಡೌನ್‌ನಿಂದಾಗಿ ಶಾಲೆ, ಕಾಲೇಜುಗಳು ಬಾಗಿಲು ತೆರೆಯದ ಕಾರಣ ವಿಶ್ವದ ಮೂರನೇ ಒಂದು ಭಾಗದಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ಜಾಗತಿಕ ಶಿಕ್ಷಣ ಕ್ಷೇತ್ರದ ತುರ್ತು ಪರಿಸ್ಥಿತಿಗೆ ನಾಂದಿ ಹಾಡಿದೆ ಎಂದು ಯುನಿಸೆಫ್ ವರದಿ ಆತಂಕ ವ್ಯಕ್ತಪಡಿಸಿದೆ.
ಕೋವಿಡ್ ಅವಧಿಯಲ್ಲಿ ವಿಶ್ವದಾದ್ಯಂತ ಶಾಲೆಗಳು ಮುಚ್ಚಿದ ಕಾರಣ ಕನಿಷ್ಟ 46.30 ಕೋಟಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದು, ಅವರಿಗೆ ಆನ್‌ಲೈನ್ ಶಿಕ್ಷಣವೂ ದೊರೆಯುತ್ತಿಲ್ಲ ಎಂದು ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ರಿಟ್ಟಾ ಹೇಳಿದ್ದಾರೆ.
ಕೋವಿಡ್ ಪಿಡುಗಿನ ಬೆಳವಣಿಗೆಯಿಂದಾಗಿ ಆಫ್ರಿಕಾದ ಸಹರಾ ಉಪ ವಲಯವು ತೀವ್ರ ತೊಂದರೆಗೊಳಗಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿಯೇ ಅತಿ ಹೆಚ್ಚು ಮಕ್ಕಳು, ಅಂದರೆ ಕನಿಷ್ಠ 14.7 ಕೋಟಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ವರದಿಯಲ್ಲಿ ಉಲ್ಲೇಖವಾಗಿದೆ.
ಲಾಕ್‌ಡೌನ್‌ನಿಂದ ಶಾಲೆ ಮುಚ್ಚಿರುವುದು ಬಹುದೊಡ್ಡ ಪ್ರಮಾಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಶೈಕ್ಷಣಿಕ ತುರ್ತುಪರಿಸ್ಥಿ ನಿರ್ಮಾಣವಾಗಿದೆ. ಇದರ ಸಾಮಾಜಿಕ ಮತ್ತು ಆರ್ಥಿಕ ದುಷ್ಪರಿಣಾಮಗಳು ಮುಂದಿನ ದಶಕಗಳಲ್ಲಿ ಗೋಚರಿಸಲಿವೆ ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ರಿಟ್ಟಾ ಪ್ರತಿಕ್ರಿಯಿಸಿದರು.
ವರ್ಷಾಂತ್ಯದಲ್ಲಿ ಕೋವಿಡ್ ಲಸಿಕೆ:
ವಾಷಿಂಗ್ಟನ್: ಕಣ್ಣಿಗೆ ಕಾಣದ ಕೊವೀಡ್ ಶತ್ರುವಿಗೆ ಈ ವರ್ಷಾಂತ್ಯದಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ನಡೆದ ರಿಪಬ್ಲಿಕನ್ ನೇಷನ್ ಸಮಾವೇಶದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನದಲ್ಲಿ ಅಮೆರಿಕ ಸೇರಿದಂತೆ ಇಡೀ ವಿಶ್ವ ಕಣ್ಣಿಗೆ ಕಾಣದ ಹೊಸ ಶತ್ರುವಿನಿಂದ ನಲುಗಿ ಹೋಗಿದೆ ಆದರೆ ಈ ವೈರಸ್‌ಗೆ ಶೀಘ್ರ ಲಸಿಕೆ ದೊಎರಯುವ ಮೂಲಕ ಮತ್ತೆ ಜನರು
ಹಿಂದಿನಂತೆ ಯಾವುದೇ ಭಯಬೀತರಾಗದೆ ಜೀವನ ನಡೆಸುತ್ತಾರೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು. ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ. ಈ ವರ್ಷ ಸುರಕ್ಷಿತ ಮತ್ತು ಪರಿ ಣಾಮಕಾರಿ ಲಸಿಕೆಯನ್ನು ಬಿಡುಗಡೆ ಮಾಡುವ ಮೂಲಕ ಕೋವಿಡ್ ತೊಲಗಿಸುತ್ತೇವೆ ಎಂದರು.