ಹೊಸದಿಲ್ಲಿ: ನೀವು ರೈಲಿನ ಎ.ಸಿ.ಬೋಗಿಯಲ್ಲಿ ಪ್ರಯಾಣಿಸುವವರಾದರೆ ಈ ವಿಚಾರ ಬೇಸರ ತರುವಂಥದ್ದೇ. ಪ್ರಯಾಣಿಕರಿಗೆ ಹೊದಿಕೆಗಳನ್ನು ನೀಡದೆ ಇರಲು ಇಲಾಖೆ ಚಿಂತನೆ ನಡೆಸುತ್ತಿದೆ. ಇತ್ತೀಚೆಗೆ ಸಂಸತ್‌ನಲ್ಲಿ ಮಂಡಿಸಲಾಗಿರುವ ಮಹಾಲೇಖಪಾಲ (ಸಿಎಜಿ)ರ ವರದಿಯಲ್ಲಿ ರೈಲು ಬೋಗಿಗಳಲ್ಲಿ, ನಿಲ್ದಾಣದಲ್ಲಿ ಕನಿಷ್ಠ ಪ್ರಮಾಣದ ಶುಚಿತ್ವ ಮತ್ತು ಪ್ರಯಾಣಿಕರಿಗೆ ನೀಡುವ ಆಹಾರದಲ್ಲಿ ಗುಣಮಟ್ಟ ಕಾಯ್ದು ಕೊಳ್ಳಲಾಗದೆ ಇರು ತ್ತಿ ರುವ ಬಗ್ಗೆ ಪ್ರಬಲ ವಾಗಿ ಆಕ್ಷೇಪಿಸಲಾಗಿತ್ತು. ಹೀಗಾಗಿ ಎ.ಸಿ. (ಹವಾ ನಿಯಂತ್ರಿತ) ಕೋಚ್‌ಗಳಲ್ಲಿ ಹೊದಿಕೆ ಗಳನ್ನು ನೀಡದೇ ಇರಲು ಇಲಾಖೆ ಚಿಂತನೆ ನಡೆಸುತ್ತಿದೆ.
ಹೊದಿಕೆ ನೀಡದೆ ಬದಲಿ ವ್ಯವಸ್ಥೆಗಳಾದ ಎ.ಸಿ.ಯ ಪ್ರಮಾಣ ನಿಯಂತ್ರಣದಲ್ಲಿ ಇರಿಸುವ, ತೊಳೆಯಲು ಸುಲಭವಾಗು ವಂಥ ಹೊದಿಕೆಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬೋಗಿಗಳಲ್ಲಿ ತಾಪಮಾನವನ್ನು 24 ಡಿಗ್ರಿ ಸೆಲಿÏಯಸ್‌ಗೆ ಇರುವ ಪ್ರಾಯೋಗಿಕ ವ್ಯವಸ್ಥೆಯನ್ನು ಶೀಘ್ರವೇ ಜಾರಿ ಮಾಡ ಲಿದೆ. ಸದ್ಯ ಅದರ ಪ್ರಮಾಣ 19 ಡಿ.ಸೆ. ಇದೆ. ಹಾಲಿ ತಾಪ ಮಾನದಲ್ಲಿ ಚಳಿಯಾಗುವ ಕಾರಣ ಹೊದಿಕೆ ನೀಡಬೇಕಾಗುತ್ತದೆ.
ವೆಚ್ಚದಾಯಕ: ಹೊದಿಕೆ ಮತ್ತು ಹಾಸಿಗೆಗೆ ಹೊದಿಸಲಾಗುವ ವಸ್ತ್ರಗಳನ್ನು ಶುಚಿಗೊ ಳಿಸಲು ಒಂದು ವಸ್ತ್ರಕ್ಕೆ 55 ರೂ. ವೆಚ್ಚ ವಾಗುತ್ತದೆ. ಆದರೆ ಪ್ರಯಾಣಿಕರಿಂದ ಕೇವಲ 22 ರೂ. ಪಡೆದುಕೊಳ್ಳಲಾಗುತ್ತಿದೆ. ನಿಯಮ ಪ್ರಕಾರ ಪ್ರತಿ ಹೊದಿಕೆ, ಹಾಸು ಗಳನ್ನು 2 ತಿಂಗಳಿಗೊಮ್ಮೆ ಸ್ವತ್ಛ ಮಾಡ ಬೇಕು. ಆದರೆ ಅದನ್ನು ಪಾಲಿಸಲಾಗುತ್ತಿಲ್ಲ. ಸತತ ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ವಸ್ತ್ರಗಳನ್ನು ಒಗೆದು ಶುಚಿ ಮಾಡುವ ಆವರ್ತನವನ್ನು ತಗ್ಗಿಸಲು ಮುಂದಾಗಿದೆ. ಜತೆಗೆ ಹೊಸ ವಿನ್ಯಾಸದ, ಹಗುರ, ಸುಲಭ ವಾಗಿ ತೊಳೆಯಲು ಸಾಧ್ಯ ವಾಗುವ ಹೊದಿಕೆ ಒದಗಿ ಸುವ ಬಗ್ಗೆಯೂ ಚಿಂತನೆ ನಡೆಸಿದೆ. ಹೀಗಾಗಿ, ನಾರುವಂಥ ಹೊದಿಕೆಗಳು ಶೀಘ್ರವೇ ತೆರೆಮರೆಗೆ ಸರಿಯಲಿವೆ.
ಟ್ರ್ಯಾಕ್‌ನಲ್ಲಿ ಬಿದ್ದ ಚಿನ್ನದ ಸರ ಹುಡುಕಿ ಕೊಟ್ಟ ಸ್ಟೇಷನ್ ಮಾಸ್ಟರ್
ರೈಲು ಪ್ರಯಾಣದ ವೇಳೆ ಟಾಯ್ಲೆಟ್ ಮೂಲಕ ಕಳೆದು ಹೋದ ಚಿನ್ನದ ಸರ ಅಥವಾ ಇನ್ನು ಯಾವುದೇ ಬೆಲೆಬಾಳುವ ವಸ್ತು ಸಿಗುವುದು ಕಷ್ಟ. ಆದರೆ ಮಹಾ ರಾಷ್ಟ್ರದ ಯೋಲಾ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಅನಿಲ್ ಕುಮಾರ್ ಶುಕ್ಲಾ ಇದೀಗ ಕಳೆದುಹೋಗಿದ್ದ ಚಿನ್ನದ ಸರ ಹುಡುಕಿಕೊಟ್ಟಿದ್ದಾರೆ. ಜು.16ರಂದು ನೊನಾಡ್‌ನಿಂದ ಮನ್ಮಾಡ್‌ಗೆ ತೆರ ಳು ತ್ತಿ ರುವಾಗ ಮೂಳೆ ತಜ್ಞ ಡಾ| ಚವನ್ ಪಾಟೀಲ್ ಧರಿ ಸಿದ್ದ 50 ಗ್ರಾಮ್ ಚಿನ್ನದ ಸರ ಟಾಯ್ಲೆಟ್ ಮೂಲಕ ಟ್ರ್ಯಾಕ್‌ಗೆ ಬಿತ್ತು. ಸಿಬಂದಿ ಮತ್ತು ಇತರ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ವಾಗಿ ರಲಿಲ್ಲ. ಅವರ ಪುತ್ರಿ ಟ್ವೀಟ್ ಮೂಲಕ ರೈಲ್ವೇ ಸಚಿವ ಸುರೇಶ್ ಪ್ರಭುಗೆ ಮಾಹಿತಿ ನೀಡಿದರು. ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅನಂತರ, ಹಳಿಯ ಲ್ಲೆಲ್ಲ ಹುಡುಕಿ ದಾಗ ಚಿನ್ನದ ಸರ ಪತ್ತೆ ಯಾಯಿತು. ಬಳಿಕ ಅದನ್ನು ವೈದ್ಯರಿಗೆ ನೀಡಲಾಯಿತು.