Advertisement

ನೂಜಿಬಾಳ್ತಿಲ: ಒರುಂಬಾಲು ಪ್ರದೇಶಕ್ಕೆ ಎ.ಸಿ. ಭೇಟಿ

10:56 PM Apr 08, 2019 | Team Udayavani |

ಕಲ್ಲುಗುಡ್ಡೆ: ನೂಜಿಬಾಳ್ತಿಲ ಗ್ರಾಮದ 2ನೇ ವಾರ್ಡ್‌ನ ಬದಿಬಾಗಿಲು, ಒರುಂಬಾಲು ರಸ್ತೆ ಅಭಿವೃದ್ಧಿಯಾಗದೆ ಮತದಾನ ಮಾಡುವುದಿಲ್ಲವೆಂದು ನಿರ್ಧರಿಸಿ, ಬಳಿಕ ಚುನಾವಣಾಧಿಕಾರಿಗಳ ಭರವಸೆಯಂತೆ ಬಹಿಷ್ಕಾರ ಹಿಂಪಡೆದಿದ್ದ ಒರುಂಬಾಳು ಪ್ರದೇಶಕ್ಕೆ ಸೋಮವಾರ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಭೇಟಿ ನೀಡಿ ರಸ್ತೆ ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು.

Advertisement

ಸ್ಥಳದಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರನ್ನು ವಿಚಾರಿಸಿ, ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಅವರು, ಚುನಾವಣೆ ಮುಗಿದ ಬಳಿಕ ರಸ್ತೆ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯವಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಗ್ರಾಮಸ್ಥರೆಲ್ಲರೂ ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸಿ ಎಂದು ಸಲಹೆ ನೀಡಿದರು. ಏನೇ ಸಮಸ್ಯೆ ಇದ್ದರೂ ಚುನಾವಣೆ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಎಂಜಿನಿಯರ್‌ಗಳು ಕೂಡಾ ಜತೆಯಲ್ಲಿದ್ದಾರೆ ಎಂದರು.

ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿಗಸ್‌, ತಾ.ಪಂ. ಇಒ ಬಾಬು, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯೇಂದ್ರ ಸಾಲಿಯಾನ್‌, ಸಹಾಯಕ ಎಂಜಿನಿಯರ್‌ ಭರತ್‌, ಪ್ರಭಾರ ಕಂದಾಯ ನಿರೀಕ್ಷಕ ರಂಜನ್‌, ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆನಂದ ಎ. ಉಪಸ್ಥಿತರಿದ್ದರು. ಗ್ರಾಮಸ್ಥರಾದ ಶ್ರೀಧರ ಕಂಪ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ನೂಜಿಬಾಳ್ತಿಲ ಒಕ್ಕೂಟದ ಅಧ್ಯಕ್ಷ ಪುರುಷೋತ್ತಮ ಗೌಡ ಎಂ.ಪಿ., ಪೂವಪ್ಪ ಗೌಡ ಮಿತ್ತಂಡೆಲ್‌, ಅಭಿಲಾಷ್‌ ಮಂಜೋಳಿ, ಸುಭಾಷ್‌, ಸುದೀಶ್‌ ಮಂಜೋಳಿ, ಪುರುಷೋತ್ತಮ ಕಂಪ, ಸುಜಾ ಐಸಾಕ್‌, ಬಿನಿಶ್‌ ಮಂಜೋಳಿ, ಭವಿತ ಮಿತ್ತಂಡೆಲ್‌, ಪುರುಷೋತ್ತಮ ಎನ್‌.ಸಿ., ಅಶ್ವತ್ಥ್ ಕಂಪ, ಮೊದಲಾದವರು ಅಧಿಕಾರಿಗಳಲ್ಲಿ ರಸ್ತೆ ಸಮಸ್ಯೆ ಬಗ್ಗೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next