Advertisement

Truck: ಇನ್ನು ಟ್ರಕ್‌ ಕ್ಯಾಬಿನ್‌ಗಳಲ್ಲೂ ಎ.ಸಿ. ಕಡ್ಡಾಯ

09:51 PM Dec 10, 2023 | Team Udayavani |

ನವದೆಹಲಿ: ಕಾರು, ಬಸ್‌ಗಳಲ್ಲಿ ಎಸಿ ಇರುವುದು ಸಾಮಾನ್ಯ. ಅಂಥದ್ದೇ ವ್ಯವಸ್ಥೆ ಟ್ರಕ್‌ಗಳಲ್ಲಿಯೂ ಇದ್ದರೆ ಹೇಗಿರುತ್ತದೆ? ದೇಶದಲ್ಲಿ 2025 ಅ.1ರಿಂದ ನಿರ್ಮಾಣವಾಗಲಿರುವ ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಅಂಥ ವ್ಯವಸ್ಥೆ ಕಡ್ಡಾಯಗೊಳಿಸುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆಯ ಮೂಲಕ ಕಡ್ಡಾಯಗೊಳಿಸಿದೆ.

Advertisement

ಈ ಬಗ್ಗೆ ಜುಲೈನಲ್ಲಿ ಮಾತನಾಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು, ಈ ಬಗೆಗಿನ ಕರಡು ಅಧಿಸೂಚನೆಗೆ ಒಪ್ಪಿಗೆ ನೀಡಿದ್ದ ಬಗ್ಗೆ ತಿಳಿಸಿದ್ದರು.

ಯಾಕೆ ಇಂಥ ತೀರ್ಮಾನ?
ಟ್ರಕ್‌ ಚಾಲಕರು ಅತ್ಯಂತ ಬಿಸಿಯ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿದ್ದವು. ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಇವರ ಯೋಗಕ್ಷೇಮ ಅತಿಮುಖ್ಯ ಎಂದು ಮನಗಂಡಿರುವ ಗಡ್ಕರಿ ಈ ತೀರ್ಮಾನ ಮಾಡಿದ್ದಾರೆ. ಆದರೆ ಹೀಗೆ ದೀರ್ಘಾವಧಿಗೆ ಹವಾನಿಯಂತ್ರಿತ ಸೌಲಭ್ಯ ಒದಗಿಸುವುದು ಬಹಳ ವೆಚ್ಚದಾಯಕ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರೂ ಕೇಂದ್ರ ಸರ್ಕಾರ ಅದನ್ನು ಪರಿಗಣಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next