Advertisement
ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಘೋ ಷಣೆ ಕೂಗುತ್ತಾ ಮುಖ್ಯರಸ್ತೆಯ ಕಡೆಗೆ ಬರುತ್ತಿದ್ದಂತೆ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆಯಿತಲ್ಲದೇ, ಕೆಲಕಾಲ ನೂಕಾಟ ನಡೆಯಿತು. ಇದನ್ನು ಕಂಡ ಶಾಸಕ ಯಶ್‌ಪಾಲ್ ಸುವರ್ಣ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ದೂಡಬೇಡಿ. ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರನ್ನು ಎಚ್ಚರಿಸಿದರು.
ಯಾವುದೇ ತನಿಖೆ ನಡೆಸದೇ ಏನೂ ಆಗಿಲ್ಲ ಎಂಬ ಹೇಳಿಕೆ ಹೇಗೆ ನೀಡಿದಿರಿ? ತಮಾಷೆಗಾದರೂ ಶೌಚಾಲ ಯದಲ್ಲಿ ಖಾಸಗಿ ವೀಡಿಯೋ ತೆಗೆಯುವುದನ್ನು ಐಪಿಎಸ್ ಅಧಿಕಾರಿಯಾಗಿ ನೀವು ಒಪ್ಪುತ್ತೀರಾ ಎಂದು ವಿದ್ಯಾರ್ಥಿನಿಯರು ಎಸ್‌ಪಿಯವರಿಗೆ ಪ್ರಶ್ನೆಗಳ ಸುರಿಮಳೆಗೈದರು. ತನಿಖಾಧಿಕಾರಿಯನ್ನು ಬದಲಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ಇದರ ಹಿಂದಿನ ಜಾಲವನ್ನು ಭೇದಿಸಬೇಕು ಎಂದು ಆಗ್ರಹಿಸಿದರು.
Related Articles
Advertisement
ಈ ವೇಳೆ ಎಎಸ್‌ಪಿ ಸಿದ್ದಲಿಂಗಪ್ಪ ಸಹಿತ ನಗರ ಠಾಣೆಯ ಪೊಲೀಸ್ ಅಧಿಕಾರಿ ಸಿಬಂದಿ ಇದ್ದರು. ಪ್ರತಿಭಟನೆ ವೇಳೆ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಮುಖ್ ಭಟ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿತ್ಯ, ಜಿಲ್ಲಾ ಸಂಚಾಲಕ ಗಣೇಶ್, ನಗರ ಕಾರ್ಯದರ್ಶಿ ಶ್ರೀವತ್ಸ, ತಾಲೂಕು ಸಂಚಾಲಕ ಅಜಿತ್, ಐಶ್ವರ್ಯ, ಅಭಿಲಾಷಾ, ಮನು, ಶ್ರೀಹರಿ, ಭಾವನಾ, ಆಶಿಶ್ ಮತ್ತಿತರರು ಇದ್ದರು.
“ಬ್ಯೂಟಿಫುಲ್ ಶಿಕ್ಷೆ ಎಂದಿದ್ದರು…!”
ತಪ್ಪು ಮಾಡಿದ ಮೂವರು ವಿದ್ಯಾರ್ಥಿನಿಯರು ಅಂದು ಕಾಲೇಜಿನ ಹೊರಗೆ ನಿಂತಿದ್ದರು. ಆ ವೇಳೆ ಸ್ಕೂಟಿಯಲ್ಲಿ ಬಂದ ನಮ್ಮ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಅವರು ಆ ವಿದ್ಯಾರ್ಥಿನಿಯರಿಗೆ ಐದು ಬಾರಿ ಏನೋ ಬರೆಯುವ ಶಿಕ್ಷೆ ನೀಡಿ ಕಳುಹಿಸಿದರು. ಅನಂತರ ಖಾದರ್ ಅವರು ನಮ್ಮ ಬಳಿಗೆ ಬಂದು ನಾನು ಅವರ ವಿರುದ್ಧ”ಬ್ಯೂಟಿಫುಲ್ ಆ್ಯಕ್ಷನ್’ ತೆಗೆದುಕೊಂಡಿದ್ದು, ಐದು ಬಾರಿ ಬರೆಯಲು ಹೇಳಿದ್ದೇನೆ. ಅವರು ಇದನ್ನು ಗಮ್ಮತ್ತಿಗೆ ಮಾಡಿದ್ದಾರಂತೆ, ಹೋಗಲಿ ಬಿಡಿ ಎಂದರು. ಇಂಥ ಘಟನೆಗೆ ಆಡಳಿತಾಧಿಕಾರಿ ನೀಡಿರುವ ಇಂಪೊಸಿಶನ್ (ಶಿಕ್ಷೆ) ಇದು. ಬೇರೆ ವಿದ್ಯಾರ್ಥಿಗಳು ಮಾಡಿದ್ದರೆ ಇದೇ ರೀತಿಯ ಶಿಕ್ಷೆ ನೀಡುತ್ತಿದ್ದರೇ ಎಂದು ಆ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ವೇಳೆ ಕಳವಳ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆ ಶೈಕ್ಷಣಿಕ ಗುಣಮಟ್ಟಕ್ಕೆ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿನಿಗೆ ಅನ್ಯಾಯವಾದಾಗ ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ. ಅದನ್ನು ದಮನಿ ಸಲು ಪೊಲೀಸ್ ಇಲಾಖೆ ಮುಂದಾಗಬಾರದು. ಹೊರ ಜಿಲ್ಲೆಗಳಿಂದ ಬಂದಿರುವ ಪೊಲೀಸರು ಮೊದಲು ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಬೇಕು.– ಯಶ್‌ಪಾಲ್ ಎ ಸುವರ್ಣ, ಶಾಸಕರು, ಉಡುಪಿ