Advertisement
ಕ್ರಮ ಕೈಗೊಳ್ಳಿ: ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ಎಬಿವಿಪಿ ಕಾರ್ಯಕರ್ತರು, ವಿವಿಗಳ ಅಂಕಪಟ್ಟಿ ಅಕ್ರಮಗಳಲ್ಲಿ ಉನ್ನತ ಶಿಕ್ಷಣ ಸಚಿವರು ಭಾಗಿಯಾಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
Related Articles
Advertisement
ಬೇಕಾಬಿಟ್ಟಿ ಮುದ್ರಣ: ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 9 ಲಕ್ಷ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 20 ಲಕ್ಷಕ್ಕೂ ಹೆಚ್ಚು ಅಂಕಟ್ಟಿಗಳನ್ನು ಬೇಕಾಬಿಟ್ಟಿ ಮುದ್ರಿಸಿದ ಪರಿಣಾಮವಾಗಿ ವಿವಿಯ ಗೋದಾಮುಗಳಲ್ಲಿ ಕೊಳೆಯುತ್ತಿವೆ ಎಂದರು.
ಎಬಿವಿಪಿ ಹಕ್ಕೊತ್ತಾಯಗಳೇನು?: ವಿವಿಗಳಲ್ಲಿ ಅಂಕಪಟ್ಟಿಗಳ ಮುದ್ರಣದ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ನಿದ್ಯಾìಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಎಂಎಸ್‌ಐಲ್‌ಗೆ ಟೆಂಡರ್ ಕೊಡಬೇಕೊ ಅಥವಾ ಬೇರೆಯವರಿಗೆ ಕೊಡಬೇಕೊ ಎಂದು ತೀರ್ಮಾನಿಸುವುದನ್ನು ವಿವಿಗಳಿಗೆ ಬಿಟ್ಟು, ಅಂಕಪಟ್ಟಿಗಳ ಹೊಣೆಗಾರಿಕೆಗಾಗಿ ಯೋಜನೆ ರೂಪಿಸಬೇಕು.
ಅಂಕಪಟ್ಟಿಗಳ ಖರೀದಿಯನ್ನು ಆಯಾ ವಿವಿಗಳಿಗೆ ಬಿಡಬೇಕು. ಕುಲಪತಿಗಳೇ ವಿವಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ವಿವಿಗಳಿಗೆ ಕುಲಪತಿಗಳನ್ನು ನೇಮಕಾತಿ ಮಾಡಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹು¨ªೆಗಳನ್ನು ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಅಖೀಲ್, ವಿಜಯಕುಮಾರ್, ಬಾಬು, ವಿನೋಧ್, ಸಂತೋಷ್, ಸ್ನೇಹ, ಮಮತಾ, ಜಾನಕಿ, ಭವ್ಯ, ರಶ್ಮಿ ಇತರರಿದ್ದರು.