Advertisement

ಜೆ.ಎನ್.ಯು. ಕ್ಯಾಂಪಸ್ ಘರ್ಷಣೆ : ವಿದ್ಯಾರ್ಥಿ ನಾಯಕಿ ಸಹಿತ ಹಲವರಿಗೆ ಗಂಭೀರ ಗಾಯ

09:55 AM Jan 06, 2020 | Hari Prasad |

ನವದೆಹಲಿ: ಇಲ್ಲಿನ ಜವಹರಲಾಲ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇಂದು ಸಂಜೆ ವಿದ್ಯಾರ್ಥಿ ಬಣಗಳ ನಡುವೆ ಘರ್ಷಣೆ ಸಂಭವಿಸಿದೆ. ಎಬಿವಿಪಿ ಹಾಗೂ ಎಡಪಂಥೀಯ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿತು.

Advertisement

ಈ ಘರ್ಷಣೆಲ್ಲಿ ಜವಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕಿಯಾಗಿರುವ ಐಶ್ಯ ಘೋಷ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಗಲಭೆಯಲ್ಲಿ ಹೊರಗಿನವರ ಕೈವಾಡ ಇರುವ ಶಂಕೆಯೂ ಇದೀಗ ವ್ಯಕ್ತವಾಗಿದೆ.


ಇಲ್ಲಿನ ಸಾಬರಮತಿ ಹಾಸ್ಟೆಲ್, ಮಹಿ ಮಾಂಡ್ವಿ ಹಾಸ್ಟೆಲ್, ಪೆರಿಯಾರ್ ಹಾಸ್ಟೆಲ್ ಗಳಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಈ ದಾಳಿ ನಡೆದಿದ್ದು ಹಲವರು ಗಾಯಗೊಂಡಿದ್ದಾರೆ.


ಕೆಲವೊಬ್ಬರು ಮುಸುಕುಧಾರಿ ವ್ಯಕ್ತಿಗಳು ಜೆ.ಎನ್.ಯು.ನಲ್ಲಿರುವ ಸಾಬರಮತಿ ಹಾಗೂ ಇತರೇ ಹಾಸ್ಟೆಲ್ ಗಳಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಬಡಿಗೆ ಮತ್ತು ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆಸಿದರು ಎಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯು (JNSU) ಆರೋಪಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next