Advertisement

ಬಡವರ ನಿವೇಶನ ಕಬಳಿಕೆ: ಕ್ರಮಕ್ಕೆ ಮನವಿ

03:55 PM Oct 18, 2019 | Team Udayavani |

ಕೋಲಾರ: ಕಸಬಾ ಹೋಬಳಿ ಸರ್ವೆ ನಂ.128, ವಾರ್ಡ್‌ ನಂ.14ರಲ್ಲಿ 1975-76ರಲ್ಲಿ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಅಧಿಕಾರಿಗಳು ನಿವೇಶನ ನೀಡಿದ್ದು, ಈ ಜಮೀನನ್ನು ಬಲಾಡ್ಯರು ಕಬಳಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಅಂಬೇಡ್ಕರ್‌ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್‌, ದಲಿತ ಮುಖಂಡರಾದ ಪಿ.ಸಿ.ಬಡಾವಣೆಯ ಸುಬ್ರಮಣಿ, ನಗರಸಭೆ ಪೌರಾಯುಕ್ತರಲ್ಲಿ ದೂರು ನೀಡಿದ್ದಾರೆ.

Advertisement

ಬಡವರು ಮನೆಗಳನ್ನು ಕಟ್ಟಿಕೊಳ್ಳಲು ಆರ್ಥಿಕವಾಗಿ ಶಕ್ತರಿಲ್ಲದ ಕಾರಣ, ಮನೆಗಳನ್ನು ಕಟ್ಟಿಕೊಳ್ಳದೆ ಇಷ್ಟು ವರ್ಷಗಳ ಕಾಲ ಇದ್ದು, ಈಗ ಈ ಜಮೀನು ಖಾಲಿ ಇರುವ ವಿಷಯವನ್ನು ಅರಿತ ಕೆಲ ಭೂ ಮಾಫಿಯಾದವರು ಜಮೀನು ಕಬಳಿಸಲು ಹಾಗೂ ಬಡವರಿಗೆ ಕೊಟ್ಟಿರುವ ನಿವೇಶನಗಳನ್ನು ಕಬಳಿಸುವ ನಿಟ್ಟಿನಲ್ಲಿ ಕೆಲ ರಾಜಕೀಯ ಪ್ರಭಾವಿಗಳಿಂದ ಹಾಗೂ ಕೆಲ ಅಧಿಕಾರಿಗಳಿಂದ ಅಧಿಕಾರವನ್ನು ದುರ್ಬಳಕೆ ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಅಧಿಕಾರಿಗಳಿಗೆ ಹಾಗೂ ಬಡವರಿಗೆ ವಂಚನೆ ಮಾಡಿರುವುದು ಖಂಡನೀಯ ಎಂದು ದೂರಿದರು.

ನಿವೇಶನದಾರರಿಗೆ ಮನೆ ಕಟ್ಟಿಕೊಳ್ಳಲು ಈ-ಖಾತೆ ಮತ್ತು  ರವಾನಗಿ ಮಾಡಿಕೊಟ್ಟು, ಕಡು ಬಡವರ ಹೊಟ್ಟೆ ಮೇಲೆ ಹೊಡೆಯುವ ಭೂಮಾಫಿಯಾ ದಂಧೆಕೋರರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಂಬೇಡ್ಕರ್‌ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್‌, ದಲಿತ ಮುಖಂಡರಾದ ಪಿ.ಸಿ.ಬಡಾವಣೆಯ ಸುಬ್ರಮಣಿ, ಶ್ರೀಕಾಂತ್‌, ರಾಜು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next