Advertisement

ಶಾಸಕರಿಂದ ಅಧಿಕಾರ ದುರುಪಯೋಗ: ಕಾಶಪ್ಪನವರ

04:42 PM Jul 09, 2020 | mahesh |

ಹುನಗುಂದ: ಇಲ್ಲಿಯ ಟಿಎಪಿಸಿ ಎಂಎಸ್‌ ಆಡಳಿತ ಮಂಡಳಿಯ ಚುನಾವಣೆಗೆ ತಾಲೂಕಿನ 44 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಮತದಾನದ ಹಕ್ಕನ್ನು ಪಡೆಯಲು ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಅವರ ಬೆಂಬಲಿಗರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

Advertisement

ಮಂಗಳವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟ್ಟಿಗನೂರ ಮತ್ತು ತುಂಬ ಪಿಕೆಪಿಎಸ್‌ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾನದ ಹಕ್ಕನ್ನು ಪಡೆಯಲು ಮೊದಲು ಚುನಾವಣೆ ಪ್ರಕ್ರಿಯೆಗೆ ನೇಮಕಗೊಂಡ ಸುಪರ್‌ ವೈಜರ್‌ ಅವರನ್ನು ಜಿಲ್ಲಾಧಿಕಾರಿಗಳ ಮೂಲಕ ವರ್ಗಾವಣೆ ಮಾಡಿಸಿ ಹೊಸ ನೇಮಕ ಮಾಡಿಸಿದ್ದಾರೆ. ಅವರ ಮೇಲೆ ಒತ್ತಡ ಹೇರಿ ಬಿಜೆಪಿ ಪರ ವ್ಯಕ್ತಿಗಳಿಗೆ ಅವಕಾಶ ನೀಡುವಂತೆ ಠರಾವು ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಮತದಾನದ ಹಕ್ಕನ್ನು ಪಡೆಯುವ ಗೊಂದಲ ಏರ್ಪಟಾಗ ಸಭೆಯನ್ನು ಮುಂದೂಡಿ ಜು. 7 ರಂದು ಎರಡು ಪಿಕೆಪಿಎಸ್‌ನಲ್ಲಿ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ನೋಟಿಸ್‌ ನೀಡದೇ ಏಕಾಏಕಿಯಾಗಿ ಸಭೆ ನಡೆಸಿ ಬಿಜೆಪಿ ಪರ ವ್ಯಕ್ತಿಗೆ ಮತದಾನದ ಹಕ್ಕು ಸಿಗುವಂತೆ ಮಾಡಿದ ಠರಾವು ಕಾನೂನು ಬಾಹಿರವಾಗಿದೆ ಎಂದು ದೂರಿದರು.

ಘಟ್ಟಿಗನೂರ ಮತ್ತು ತುಂಬ ಪಿಕೆಪಿಎಸ್‌ನಲ್ಲಿ ನಡೆದ ಅಕ್ರಮ ಠರಾವು ಕುರಿತು ಚುನಾವಣೆ ಅ ಧಿಕಾರಿಗಳಾದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡು ಅದಕ್ಕೆ ತಡೆ ನೀಡಬೇಕು. ಇಲ್ಲದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ, ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂಗವಾಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಬಸವಂತಪ್ಪ ಅಂಟರದಾನಿ, ತುಂಬ ಪಿಕೆಪಿಎಸ್‌ ಅಧ್ಯಕ್ಷ ಸಿದ್ದಣ್ಣ ನರಗುಂದ, ಘಟ್ಟಿಗನೂರ ಪಿಕೆಪಿಎಸ್‌ ಅಧ್ಯಕ್ಷ ಗುರಸಂಗಯ್ಯ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next