Advertisement

ಅನುದಾನ ದುರುಪಯೋಗ : ಶುಲ್ಕ ಮರುಪಾವತಿ: ಅವ್ಯವಹಾರ

10:03 AM Feb 11, 2020 | Team Udayavani |

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯರಿಗೆ ಸರಕಾರದಿಂದ ನೀಡಲಾಗುವ ಶುಲ್ಕ ಮರುಪಾವತಿ ಯೋಜನೆಯಲ್ಲಿ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜಾಗೃತ ತಂಡ ರಚಿಸಲು ನಿರ್ಧರಿಸಿದೆ.

Advertisement

ಅನುದಾನ ದುರುಪಯೋಗ ಆಗಿರುವ ಬಗ್ಗೆ ಮಹಾಲೇಖಪಾಲಕರ ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.

ಸಂಶಯದ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಅರ್ಹ ವಿದ್ಯಾರ್ಥಿನಿಯರಿಗೆ ಸರಕಾರದ ಶುಲ್ಕ ಮರುಪಾವತಿ ಯೋಜನೆ ಲಭ್ಯವಾಗಿದೆಯೇ ಎಂಬುದನ್ನು ದೃಢೀಕರಿಸಲು ಕಾಲೇಜುಗಳಿಗೆ ಈ ಜಾಗೃತ ತಂಡ ಕಳುಹಿಸಿಕೊಡಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರತಿ ಜಿಲ್ಲೆಯಲ್ಲೂ ಲೀಡ್‌ ಕಾಲೇಜುಗಳ ಮೂಲಕ ಪರಿಶೀಲನೆ ನಡೆಸಲು ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಪ್ರಾಧ್ಯಾಪಕರ ಪ್ರತ್ಯೇಕ ತಂಡವನ್ನು ರಚಿಸಿದೆ.

ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿ ಯೋಜನೆಯನ್ನು ರಾಜ್ಯ ಸರಕಾರ 2018-19ರಲ್ಲಿ ಜಾರಿಗೆ ತಂದಿತ್ತು.

Advertisement

ತಂಡದ ಕಾರ್ಯವೇನು?
ಕಾಲೇಜಿಗೆ ಭೇಟಿ ನೀಡುವ ತಂಡವು 2019-20ನೇ ಸಾಲಿನಲ್ಲಿ ಕಾಲೇಜು ದಾಖಲಾತಿ ಅನ್ವಯ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸಂಖ್ಯೆ ಪಡೆಯುತ್ತದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ಅರ್ಹರಿರುವ ವಿದ್ಯಾರ್ಥಿನಿಯರ ಸಂಖ್ಯೆ(ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿವೇತನ, ವಿದ್ಯಾಸಿರಿ, ಬಿಸಿಎಂ ಶುಲ್ಕ ಮರುಪಾವತಿ ಮತ್ತು ಇತರ ವಿದ್ಯಾರ್ಥಿ ವೇತನಗಳನ್ನು ವಿದ್ಯಾರ್ಥಿನಿಯರ ಪಡೆದಿದ್ದರೆ ಅದರ ಮಾಹಿತಿ ಪಡೆಯುತ್ತದೆ. ಸರಕಾರದಿಂದ ಶುಲ್ಕಮರುಪಾವತಿಗೆ ಅರ್ಹರಿರುವ ವಿದ್ಯಾರ್ಥಿನಿಯರ ಸಂಖ್ಯೆ. ಶುಲ್ಕ ಮರುಪಾವತಿ ಪಡೆಯಲು ಅರ್ಹರಿದ್ದು, ಕಾಲೇಜಿನಿಂದ ಅಪ್‌ಲೋಡ್‌ ಮಾಡಿದ ಮತ್ತು ಮಾಡದೇ ಇರುವ ಸಂಖ್ಯೆ ಹಾಗೂ ಇದಕ್ಕೆ ಕಾರಣ ಸಹಿತ ಒಟ್ಟಾರೆಯಾಗಿ 6 ಅಂಶಗಳನ್ನು ಕಡ್ಡಾಯವಾಗಿ ಗಮನಿಸಿ, ವರದಿಯನ್ನು ಇಲಾಖೆಗೆ ಸಲ್ಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next