Advertisement

ಪಾಕ್‌ ಹಿಡಿತದಲ್ಲಿ ಅಬುಧಾಬಿ ಟೆಸ್ಟ್‌

07:00 AM Nov 18, 2018 | Team Udayavani |

ಅಬುದಾಭಿ: ಅಬುದಾಭಿ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನದ ಬೃಹತ್‌ ಮುನ್ನಡೆಯ ಯೋಜನೆಗೆ ನ್ಯೂಜಿಲ್ಯಾಂಡ್‌ ಅಡ್ಡಗಾಲಿಕ್ಕಿದೆ. ಆದರೂ ಪಂದ್ಯ ಪಾಕ್‌ ಹಿಡಿತದಲ್ಲೇ ಇದೆ.

Advertisement

ನ್ಯೂಜಿಲ್ಯಾಂಡಿನ 153 ರನ್ನಿಗೆ ಜವಾಬು ನೀಡಲಾರಂಭಿಸಿದ ಪಾಕಿಸ್ಥಾನ 227 ರನ್ನಿಗೆ ತನ್ನ ಮೊದಲ ಇನ್ನಿಂಗ್ಸ್‌ ಮುಗಿಸಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲ್ಯಾಂಡ್‌ ಒಂದು ವಿಕೆಟಿಗೆ 56 ರನ್‌ ಮಾಡಿ 2ನೇ ದಿನದಾಟ ಮುಗಿಸಿದೆ. 18 ರನ್‌ ಹಿನ್ನಡೆಯಲ್ಲಿದೆ.ಟ್ರೆಂಟ್‌ ಬೌಲ್ಟ್ ದಾಳಿಗೆ ಪಾಕ್‌ ಕುಸಿತ ಅನುಭವಿಸಿತು. 

ಬೌಲ್ಟ್ ಸಾಧನೆ 54ಕ್ಕೆ 4 ವಿಕೆಟ್‌. ಗ್ರ್ಯಾಂಡ್‌ಹೋಮ್‌ ಮತ್ತು ಅಜಾಜ್‌ ಪಟೇಲ್‌ ತಲಾ 2 ವಿಕೆಟ್‌ ಉರುಳಿಸಿದರು. ಪಾಕಿಸ್ಥಾನ ಪರ ಬಾಬರ್‌ ಆಜಂ 62, ಅಸದ್‌ ಶಫೀಕ್‌ 43, ಹ್ಯಾರಿಸ್‌ ಸೊಹೈಲ್‌ 38 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next