Advertisement
ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಶೌಚಾಲಯದ ಮೇಲ್ಛಾವಣಿಯಲ್ಲಿ ವೈರ್‌ಗಳಿದ್ದ ಬೋರ್ಡ್ ಬಾಕ್ಸ್ ಅನ್ನು ಖದೀಮರುಚಾಣಾಕ್ಷತೆಯಿಂದ ತೆರೆದಿದ್ದಾರೆ. ನಂತರ ಆಯತಾಕಾರದಲ್ಲಿರುವ ಹಾಗೂ ಮಧ್ಯದಲ್ಲಿ ರಂಧ್ರವಿರುವ ಚಿನ್ನದ ಬಿಲ್ಲೆಗಳ ಒಳಗೆ ಕೆಲ ವೈರ್‌ಗಳನ್ನು ತೂರಿಸಿದ್ದಾರೆ. ಈ ವೈರ್‌ನ ಇನ್ನೊಂದು ತುದಿಯಲ್ಲಿ ಒಂದು ಪ್ಯಾಡ್‌ಲಾಕ್ ಅಳವಡಿಸಲಾಗಿದೆ. ಅರ್ಥಾತ್ ಬೀಗದಂತೆ ಇರುವ ಈ ಲಾಕ್‌ಗೆ 3 ಅಂಕಿಗಳ ಕೋಡ್ ಸಂಖ್ಯೆ ಹಾಕಲಾಗಿದೆ. ಅದೇ ವೈರ್‌ಗಳನ್ನು ಈಗಾಗಲೇ ಬೋರ್ಡ್‌ನಲ್ಲಿರುವ ವೈರ್‌ಗಳ ಜತೆಗೆ ಬೆಸೆಯಲಾಗಿದೆ.
ವಿಮಾನದಲ್ಲಿ ಪ್ರಯಾಣಿಸುವ ಮಾರ್ಗ ಮಧ್ಯದಲ್ಲಿಯೇ ನುರಿತ ಕಳ್ಳರೇ ಈ ಕೃತ್ಯವನ್ನು ಎಸಗಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಚಿನ್ನದ ಬಿಲ್ಲೆಗಳನ್ನು ವಿಮಾನದ ಸಿಬಂದಿ ಅಥವಾ ಸ್ವತ್ಛತಾ ಸಿಬಂದಿ ಸಹಾಯದಿಂದಲೇ ವಿಮಾನದೊಳಗೆ ತಂದು ಅಳವಡಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
Related Articles
ಕಳ್ಳರು ಚಿನ್ನದ ಬಿಲ್ಲೆ ಅಡಗಿಸಿಟ್ಟಿರುವ ವೈರಿಂಗ್ ಬೋರ್ಡ್‌ನಲ್ಲಿ ಸ್ಮೋಕ್ ಸೆನ್ಸಾರ್ ಮತ್ತು ಫ್ಯಾನ್ ಹಾಗೂ ಲೈಟಿಂಗ್‌ಗೆ ಸಂಬಂಧಿಸಿದ್ದ ವೈರ್‌ಗಳಿದ್ದವು. ಒಂದು ವೇಳೆ ಅಚಾನಕ್ಕಾಗಿ ಏನಾದರೂ ಬೇರೆ ವೈರ್‌ಗಳು ಹಾನಿಗೊಳಗಾಗಿದ್ದರೆ, ಪ್ರಯಾಣಿಕರ ಪ್ರಾಣಕ್ಕೂ ಕುತ್ತಾಗುತ್ತಿತ್ತು ಎಂದು ವಿಮಾನದ ಪೈಲಟ್ ಕಳವಳ ವ್ಯಕ್ತಪಡಿಸಿದ್ದಾರೆ.
Advertisement