Advertisement

ಅಬ್ಟಾ, ಎಲ್ಲರೂ ಬಚಾವ್‌!

03:50 AM Feb 25, 2017 | Team Udayavani |

ಬೀಜಿಂಗ್‌: ನಾವು ನೀವೆಲ್ಲರೂ ಕಾರು ಚಲಾಯಿಸುತ್ತಿರುವಾಗ ಬಾಗಿಲು ಸರಿಯಾಗಿ ಬಿದ್ದಿಲ್ಲ ಎಂದು ಗೊತ್ತಾದ ತಕ್ಷಣ ಅದನ್ನು ಸರಿಪಡಿಸಲು ಮುಂದಾಗುತ್ತೇವೆ. ಅದೇ ರೀತಿ ಹಾರುತ್ತಿರುವ ವಿಮಾನದಲ್ಲಿ ಉಂಟಾದರೆ? ಅಂಥದ್ದೊಂದು ಘಟನೆಯೂ ಚೀನಾದಲ್ಲಿ ನಡೆದಿದೆ. ಚೀನಾದ ಗ್ವಾಂಗೌjದಿಂದ ಇಂಡೋನೇಷ್ಯಾದ ಬಾಲಿಗೆ ತೆರಳುತ್ತಿದ್ದ ವಿಮಾನದ ಕ್ಯಾಬಿನ್‌ನ ಬಾಗಿಲು ಸರಿಯಾಗಿ ಮುಚ್ಚದ್ದೇ ಇದ್ದಿದ್ದರಿಂದ ಟೇಕಾಫ್ ಆಗಿರುವ ವಿಮಾನವನ್ನು ಮತ್ತೆ ಲ್ಯಾಂಡಿಂಗ್‌ ಮಾಡಲಾಗಿದೆ.

Advertisement

ಗ್ವಾಂಗೌj  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಬೆಳಗ್ಗೆ ಖಾಸಗಿ ಕಂಪನಿಯೊಂದಕ್ಕೆ ಸೇರಿದ ವಿಮಾನ ಟೇಕಾಫ್ ಆಗಿತ್ತು. ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಭಾರಿ ದುರಂತ ಸಂಭವಿಸುವುದರಲ್ಲಿತ್ತು. ಚೀನಾದ ಮಾಧ್ಯಮಗಳು ವರದಿ ಮಾಡಿರುವಂತೆ  ಟೇಕ್‌ಆಫ್ ಮಾಡಿ ಹೆಚ್ಚಾಕಡಿಮೆ ಒಂದುಧಿವರೆ ಗಂಟೆ ಕಾಲ ಹಾರಾಟ ನಡೆಸಿದ ಬಳಿಕ ಕ್ಯಾಪ್ಟನ್‌ಗೆ ಕ್ಯಾಬಿನ್‌ನ್‌ ಬಾಗಿಲು ಸರಿಯಾಗಿ ಕುಳಿತಿಲ್ಲ ಎನ್ನುವುದು ಗೊತ್ತಾಗಿದೆ. ತಕ್ಷಣ ಲ್ಯಾಂಡ್‌ ಮಾಡಲು ಸೂಚಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್‌ ವಿಮಾನವನ್ನು ಮತ್ತೆ ಗ್ವಾಂಗೌj  ಕಡೆ ತಿರುಗಿಸಿ ಮತ್ತೆ ಒಂದುವರೆ ಗಂಟೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಿ ಲ್ಯಾಂಡ್‌ ಮಾಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದು, ಭೂಸ್ಪ$ರ್ಶದ ಬಳಿಕ ಪ್ರಯಾಣಿಕರನ್ನೆಲ್ಲ ಸುರಕ್ಷಿತವಾಗಿ ಕೆಳಕ್ಕಿಳಿಸಿ ತಪಾಸಣೆ ನಡೆಸಿದ್ದಾರೆ ಎಂದು ಹೇಳಿವೆ. ಬಾಲಿಗೆ ವಿಮಾನ ಐದು ಗಂಟೆಗಳ ಪ್ರಯಾಣ ಬೆಳೆಸಬೇಕಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next