Advertisement

ದುಶ್ಚಟ ತ್ಯಜಿಸಿ ಪುಣ್ಯಾತ್ಮರಾಗಿ: ಶ್ರೀ

12:26 PM Dec 03, 2018 | |

ಕಲಕೇರಿ: ದೇಶದ ಸಂಸ್ಕೃತಿ, ಆಚಾರ, ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಇಲ್ಲಿನ ಪುಣ್ಯಭೂಮಿ ಅನೇಕ ಸಂತರ, ಶರಣರು, ಸತ್ಪುರುಷರ ನೆಲೆಬಿಡಾಗಿದೆ. ಮಠಮಾನ್ಯಗಳು, ಧರ್ಮಸಭೆಗಳು, ಪ್ರತಿಯೊಬ್ಬರಿಗೂ ಸಂಸ್ಕಾರವನ್ನು ಕಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ಸಮೀಪದ ಸುಕ್ಷೇತ್ರ ಅಸ್ಕಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 

ಪ್ರತಿಯೊಬ್ಬರು ನಮ್ಮ ದೇಹಕ್ಕೆ ಬೇಡವಾದ ದುಶ್ಚಟಗಳನ್ನು ತ್ಯಜಿಸಿ, ನಿತ್ಯ ಪುಣ್ಯಕಾರ್ಯದಲ್ಲಿ ತಮ್ಮನ್ನ ತಾವು ತೋಡಗಿಸಿಕೊಳ್ಳಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜಾತ್ರೆ-ಉತ್ಸವಗಳು ನಮ್ಮ ಸಂಸ್ಕೃತಿಯ ಪರಂಪರೆಯಾಗಿದ್ದು, ಅವುಗಳು ಸಮಾಜದಲ್ಲಿ ಸಾಮರಸ್ಯ ಉಂಟುಮಾಡಿ ಮನಸ್ಸಿಗೆ ನೆಮ್ಮದಿ ತಂದುಕೊಂಡುತ್ತವೆ. ಮುಖ್ಯವಾಗಿ ಪ್ರತಿಯೊಬ್ಬರು ಧರ್ಮವಂತರಾಗಬೇಕು.

ಗುರು-ಹಿರಿಯರನ್ನು ಪೂಜ್ಯನೀಯ ಭಾವದಿಂದ ಕಾಣವಂತವರಾಗಬೇಕು, ಧರ್ಮವನ್ನು ರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗುತ್ತದೆ ಎಂದರು.
 
ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶ್ರೀಗಳು, ಮಾಗಣಗೇರಿಯ ಡಾ| ವಿಶ್ವಾರಾಧ್ಯ ಶ್ರೀಗಳು ಮಾತನಾಡಿ, ಧರ್ಮಕಾರ್ಯಗಳು ಎಲ್ಲರನ್ನು ಸನ್ಮಾರ್ಗದತ್ತ ಕೊಂಡೊಯುತ್ತವೆ. ಪುರಾಣ ಪ್ರವಚನಗಳು ಪ್ರತಿಯೊಬ್ಬರು ಸಚ್ಚಾರಿತ್ರ್ಯದಿಂದ ಬದುಕು ಸಾಗಿಸುವುದನ್ನು ತಿಳಿಸುತ್ತವೆ. ದಾನ, ಧರ್ಮ, ಪರೋಪಕಾರದಿಂದ ಬದುಕನ್ನು ಸಾಗಿಸಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದೀಗ ಅಸ್ಕಿ ಗ್ರಾಮ ಜಗದ್ಗುರು ಮಹಾಸನ್ನಿದಿ ಅವರ ಪಾದಸ್ಪರ್ಶದಿಂದ ಪಾವನಗೊಂಡಿದೆ ಎಂದು ಹೇಳಿದರು.

ವೀರುಪಾಕ್ಷೇಶ್ವರ ಶ್ರೀಗಳು, ಜಯಸಿದ್ದೇಶ್ವರ ಶ್ರೀಗಳು, ಶಾಂತ ಶಿವಯೋಗೇಶ್ವರ ಶ್ರೀಗಳು, ಗುರುಲಿಂಗ ಶ್ರೀಗಳು, ಗೌರಿಶಂಕರ ಶ್ರೀಗಳು, ಅಭಿನವ ಸಿದ್ದಲಿಂಗ ಶ್ರೀಗಳು, ಶಿವಭಸವ ಶ್ರೀಗಳು, ಶಿವಕುಮಾರ ಸ್ವಾಮಿಗಳು, ಗುರುಮೂರ್ತಿ ಹಿರೇಮಠ ಸಮ್ಮುಖ ವಹಿಸಿದ್ದರು. ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಚಾಯಾಗೋಳ, ಸಾಹೇಬಗೌಡ ಪಾಟೀಲ ಸಾಸನೂರ, ಜಿಪಂ ಸದಸ್ಯರಾದ ಬಸನಗೌಡ ವಣಕ್ಯಾಳ, ಸಿದ್ದು ಬುಳ್ಳಾ, ಡಾ| ಪ್ರಭುಗೌಡ ಬಿರಾದಾರ, ಸಿಂದಗಿ ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌದ್ರಿ ಮಾತನಾಡಿದರು.

Advertisement

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಗ್ರಾಮದ ಹಿರಿಯರಿಗೆ, ದಾನಿಗಳಿಗೆ, ಗೌರಿಶಂಕರ ಜಾತ್ರಾ ಉತ್ಸವ ಸಮಿತಿಯವರನ್ನು ಶ್ರೀಶೈಲ ಜಗದ್ಗುರುಗಳು ಗೌರವಿಸಿದರು. ಚನ್ನಮ್ಮ ತಂಗಡಗಿ, ಸಿದ್ದರಾಮ ದೇವರು ಬೋರಗಿ, ಪ್ರಶಾಂತ ಹಾವರಗಿ, ಬಸವರಾಜ್‌ ಶಾಸ್ತ್ರೀ ಸೋಲಾಪುರ, ಮಡಿವಾಳಪ್ಪ ತಳವಾರ, ಡಾ| ಶಶಿಕಾಂತ ಭಾಗೇವಾಡಿ, ಆರ್‌.ಸಿ. ಪಾಟೀಲ, ಶ್ರೀಶೈಲ ಭಾಗೇವಾಡಿ, ಅಮರಯ್ಯ ಗವಾಯಿಗಳು ಹಿರೇಮಠ, ರಾಜಶೇಖರ್‌ ಗೆಜ್ಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಭುಗೌಡ ಬಿರಾದಾರ ಅಸ್ಕಿ ಸ್ವಾಗತಿಸಿದರು. ಶಾಂತಯ್ಯ ಹಿರೇಮಠ, ಎಚ್‌.ಎನ್‌. ಬಿರಾದಾರ, ಮಡಿವಾಳಪ್ಪ ತಳವಾರ ನಿರೂಪಿಸಿದರು. ಮುತ್ತು ಅಮರಖೇಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next