Advertisement
ಗುತ್ತಿಗೆದಾರರ ನಿರ್ಲಕ್ಷ್ಯ: ಆರೋಪಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ರಸ್ತೆ ನಿರ್ವಹಣೆಯ ಬಗ್ಗೆ ನಿರ್ಲಕ್ಷé ಮಾಡುತ್ತಿರುವ ಗುತ್ತಿದಾರರ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಬೋಳದಿಂದ ಸಚ್ಚೇರಿ ಪೇಟೆಯವರೆಗೂ ರಸ್ತೆಯ ಮಧ್ಯ ಭಾಗದಲ್ಲಿ ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡ ಪರಿಣಾಮ ಇವುಗಳ ಅರಿವಿಲ್ಲದ ಸವಾರರು ನಿತ್ಯ ಎಡವಟ್ಟು ಮಾಡಿ ಕೊಳ್ಳುತ್ತಿದ್ದಾರೆ.
ಬೋಳ ಪಾಲಿಂಗೇರಿ ಕಿರು ಸೇತುವೆಯ ಸಮೀಪದ ರಸ್ತೆಯೂ ಹದಗೆಟ್ಟಿದ್ದು, ತಿರುವಿನಲ್ಲಿ ವೇಗವಾಗಿ ಬರುವ ವಾಹನ ಸವಾರರು ಸೇತುವೆ ಸಮೀಪ ಆಯ ತಪ್ಪುವ ಎಲ್ಲ ಸಾಧ್ಯತೆಗಳಿವೆ ಎಂಬುದು ಗ್ರಾಮಸ್ಥರ ದೂರು.
ಕೂಡಲೇ ಈ ರಸ್ತೆ ದುರಸ್ತಿಯ ಜತೆ ನಿರ್ವ ಹಣೆಯನ್ನೂ ಸಂಬಂಧಪಟ್ಟ ಗುತ್ತಿಗೆದಾರರು ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕ್ರಮ ಕೈಗೊಳ್ಳಿ
ತೀರಾ ಹದಗೆಟ್ಟಿರುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷéದ ಬಗ್ಗೆ ಆಕ್ರೋಶ ಇದೆ. ಜನರು ತಾಳ್ಮೆ ಕೆಟ್ಟು ಬೀದಿಗಿಳಿಯುವ ಮುನ್ನ ಈ ಬಗ್ಗೆ ಕ್ರಮ ಕೈಗೊಳ್ಳಿ.
-ವಿನೋದ್ ಕುಮಾರ್, ಗ್ರಾಮಸ್ಥ