Advertisement

“ಕಾರ್ಮಿಕ ಕಾನೂನಿನ ಸಮಗ್ರ ಅರಿವು ಅಗತ್ಯ’

10:50 PM May 08, 2019 | Sriram |

ಮಹಾನಗರ: ಖ್ಯಾತ ನ್ಯಾಯ ವಾದಿಗಳಾದ ಚಂದ್ರಶೇಖರ ಹೊಳ್ಳ ಕೆ.,ಲತಾ ಸಿ.ಎಸ್‌. ಹೊಳ್ಳ ಅವರು ಕಾರ್ಮಿಕ ಕಾನೂನುಗಳ ಕುರಿತಂತೆ ಬರೆದ “ವೇಜಸ್‌ ಆ್ಯಂಡ್‌ ಲೇಬರ್‌ ಲಾ ಸ್‌’ ಮತ್ತು “ಲೇಬರ್‌ ಲಾ ಸ್‌ ಇನ್‌ ನಟೆÕಲ್‌’ ಎಂಬ ಎರಡು ಪುಸ್ತಕಗಳ ಬಿಡುಗಡೆ ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆಯಿತು.

Advertisement

ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್‌ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಬರಹಗಾರ, ಕಲಾವಿದ ಜೀವನದ ಅನಂತರವೂ ಬದುಕಿರುತ್ತಾರೆ. ಬರಹಗಾರನ ಪ್ರತೀ ಬರೆಹವೂ ಎಂದೆಂದಿಗೂ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಕಾನೂನಿನ ಕುರಿತಂತೆ ಜನಸಾಮಾನ್ಯರಲ್ಲಿ ಇರುವ ಸಮಸ್ಯೆ ಸವಾಲುಗಳಿಗೆ, ಸಂಸ್ಥೆಯ ಮುಖ್ಯಸ್ಥರಿಗೆ ಆವಶ್ಯಕ ಮಾಹಿತಿ ನೀಡುವ ಮಹತ್ವದ ಪುಸ್ತಕವನ್ನು ಬಿಡುಗಡೆ ಮಾಡಿರುವುದು ಸಂತಸದ ವಿಚಾರ. ಈ ಪುಸ್ತಕದ ಮುಖೇನ ಕಾರ್ಮಿಕರ, ಸಂಬಂಧಿತ ಕಂಪೆನಿಯವರಿಗೆ ಪೂರಕ ಮಾಹಿತಿಗಳು ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಚಂದ್ರಶೇಖರ ಹೊಳ್ಳ ಕೆ., ಲತಾ ಸಿ.ಎಸ್‌. ಹೊಳ್ಳ ಅವರು ಈ ಹಿಂದೆ ಮೂರು ಪುಸ್ತಕಗಳನ್ನು ಸಮಾಜಕ್ಕೆ ನೀಡಿದ್ದು, ಅದರ ಮುಖೇನ ಕಾರ್ಮಿಕ ಕಾನೂನಿನ ಸಂಬಂಧಿತ ಮಹತ್ವದ ಮಾಹಿತಿಗಳು ಜನರಿಗೆ ಲಭ್ಯವಾಗುತ್ತಿದೆ. ಇಂತಹ ಸಮಾಜಮುಖೀ ಕಾರ್ಯ ಇನ್ನಷ್ಟು ನಡೆಯುತ್ತಿರಲಿ ಎಂದ‌ು ಅವರು ಹೇಳಿದರು.

ದ.ಕ. ಕಾರ್ಮಿಕ ಇಲಾಖೆಯ ಆಫೀಸರ್‌ ವಿಲ್ಮಾ ತವ್ರೋ ಮಾತನಾಡಿ, ಕಾರ್ಮಿಕರ ವೇತನ ಕುರಿತಂತೆ ಇರುವ ಕಾನೂನುಗಳ ಬಗ್ಗೆ ಚಂದ್ರಶೇಖರ ಹೊಳ್ಳ ಕೆ., ಲತಾ ಸಿ.ಎಸ್‌. ಹೊಳ್ಳ ಅವರು ಅತ್ಯುತ್ತಮವಾಗಿ ಈ ಹಿಂದಿನ ಮೂರು ಪುಸ್ತಕದಲ್ಲಿ ವಿವರ ನೀಡಿದ್ದಾರೆ. ಇದೀಗ ನಾಲ್ಕು, ಐದನೇ ಪುಸ್ತಕವು ಇದೇ ವಿಚಾರದಲ್ಲಿ ಪ್ರಕಟಗೊಳ್ಳುತ್ತಿರುವುದು ಉತ್ತಮ ವಿಚಾರ ಎಂದು ಶ್ಲಾಘಿಸಿದರು.

ಪುಸ್ತಕದ ಲೇಖಕರು, ಚಂದ್ರಶೇಖರ ಹೊಳ್ಳ ಕೆ., ಲತಾ ಸಿ.ಎಸ್‌. ಹೊಳ್ಳ ಅವರುಉಪಸ್ಥಿತರಿದ್ದರು. ಪುರುಷೋತ್ತಮ ಭಟ್‌ ಆವರು ವಂದಿಸಿದರು. ಶಶಿಧರ ಆಚಾರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next